ಸಂಪಾಜೆ:ಭೀಕರ ರಸ್ತೆ ಅಪಘಾತ; ಆಟೋ ರಿಕ್ಷಾ ಪಲ್ಟಿಯಾಗಿ ಮೃತಪಟ್ಟ ಸಂಪಾಜೆ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸುಂದರ ಚಿಟ್ಟಿಕ್ಕಾನ
admincoorgdaily

ಮಡಿಕೇರಿ; ಇಂದು ಅಪರಾಹ್ನ ಸಂಪಾಜೆಯ ಮುಖ್ಯರಸ್ತೆಯಲ್ಲಿ ಕಾರೊಂದು ರಾಂಗ್ ಸೈಡಲ್ಲಿ ಬಂದು ರಿಕ್ಷಾಕ್ಕೆ ಡಿಕ್ಕಿಹೊಡೆದ ಕೊಯನಾಡಿನ ರಿಕ್ಷಾ ಚಾಲಕ ಸುಂದರ ಚಿಟ್ಟಿಕ್ಕಾನ(62) ರವರು ರಿಕ್ಷಾ ಪಲ್ಟಿಯಾಗಿ ಕೆಳಕ್ಕೆ ಎಸೆಯಲ್ಪಟ್ಟು ಸ್ಥಳದಲ್ಲೆ ಕೊನೆಯುಸಿರೆಳೆದರು.
ದಿ.ಬಿಸಿಲುಮನೆ ರಾಮಣ್ಣ ಗೌಡರ ಪುತ್ರರಾದ ಸುಂದರರವರು ಕೊಡಗು ಸಂಪಾಜೆ ಗ್ರಾಮ ಪಂಚಾಯತ್ ನ ಸದಸ್ಯರಾಗಿ ಮತ್ತು ಉಪಾಧ್ಯಕ್ಷರಾಗಿ ದುಡಿದವರು. ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ಸಕ್ರಿಯರಾಗಿದ್ದವರು.
ಇಂದು ಅಪರಾಹ್ನ ಗ್ರಾ.ಪಂ.ಸದಸ್ಯೆ ಅನಿತಾರವರ ಅಮ್ಮ ಪದ್ಮಾವತಿಯವರನ್ನು ಚಡವು ಬಳಿಯ ಅವರ ಮನೆಗೆ ಬಿಡಲು ಸಂಪಾಜೆಯಿಂದ ಚಡವು ಕಡೆಗೆ ರಿಕ್ಷಾದಲ್ಲಿ ಬಾಡಿಗೆಗೆ ಹೋಗುತ್ತಿದ್ದರು.
ಸಂಪಾಜೆಯ ಪೆಟ್ರೋಲ್ ಪಂಪ್ ದಾಟಿ ಸ್ವಲ್ಪ ಮುಂದಕ್ಕೆ ಹೋಗುತ್ತಿದ್ದಂತೆ ಹಿಂದಿನಿಂದ ಅತಿವೇಗದಿಂದ ಬಂದ ಕಾರು ರಿಕ್ಷಾಕ್ಕೆ ಗುದ್ದಿಕೊಂಡು ನಿಲ್ಲಿಸದೆ ಮಡಿಕೇರಿ ಕಡೆಗೆ ಪರಾರಿಯಾದರು. ರಿಕ್ಷಾ ಪಲ್ಟಿ ಯಾಗಿ ಚಾಲಕ ಸುಂದರರು ಸ್ಥಳದಲ್ಲೆ ಕೊನೆಯುಸಿರೆಳೆದರು. ಪತ್ನಿ ಚಂದ್ರಾವತಿ, ಪುತ್ರ ಭೂಸೇನೆಯಲ್ಲಿ ಯೋಧರಾಗಿರುವ ದೇವಿಪ್ರಸಾದ್, ಪುತ್ರಿಯರಾದ ಶ್ರೀಮತಿ ಸವಿತಾ ಮತ್ತು ಶ್ರೀಮತಿ ಕವಿತಾರನ್ನು ಅಗಲಿದ್ದಾರೆ.