ಸಿದ್ದಾಪುರದ ಸಂತ ಅನ್ನಮ್ಮ ಪಿಯು ಕಾಲೇಜಿಗೆ ಶೇಕಡಾ 97.91 ರಷ್ಟು ಫಲಿತಾಂಶ

Apr 10, 2026 - 00:28
 0  183
ಸಿದ್ದಾಪುರದ ಸಂತ ಅನ್ನಮ್ಮ ಪಿಯು ಕಾಲೇಜಿಗೆ ಶೇಕಡಾ 97.91 ರಷ್ಟು ಫಲಿತಾಂಶ
ಅನುಷಾ&ತಂಝಿಯಾ

ಸಿದ್ದಾಪುರ: ಸಂತ ಅನ್ನಮ್ಮ ಪಿಯು ಕಾಲೇಜು 2025-2026ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಗಮನಾರ್ಹ ಸಾಧನೆ ದಾಖಲಿಸಿದೆ. ಕಾಲೇಜಿನ ಒಟ್ಟು ಫಲಿತಾಂಶ ಶೇಕಡಾ 97.91% ಆಗಿದ್ದು, ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿದ್ದಾರೆ. 

ವಿಜ್ಞಾನ ವಿಭಾಗದಲ್ಲಿ 24 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಎಲ್ಲರೂ ಉತ್ತೀರ್ಣರಾಗಿದ್ದಾರೆ. ಇವರಲ್ಲಿ 17 ಮಂದಿ ಪ್ರಥಮ ದರ್ಜೆಯಲ್ಲಿ ಹಾಗೂ 3 ಮಂದಿ ಎರಡನೇ ತರಗತಿಯಲ್ಲಿ ತೇರ್ಗಡೆಯಾಗಿದ್ದಾರೆ. ವಿಜ್ಞಾನ ವಿಭಾಗವು ಶೇ.100 ಫಲಿತಾಂಶ ದಾಖಲಿಸಿದೆ.

ವಾಣಿಜ್ಯ ವಿಭಾಗದಲ್ಲಿ 24 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 23 ಮಂದಿ ಉತ್ತೀರ್ಣರಾಗಿದ್ದಾರೆ. ಇವರಲ್ಲಿ 16 ಮಂದಿ ಪ್ರಥಮ ದರ್ಜೆ ಹಾಗೂ 2 ಮಂದಿ ಎರಡನೇ ತರಗತಿಯಲ್ಲಿ ತೇರ್ಗಡೆಯಾಗಿದ್ದು, 1 ವಿದ್ಯಾರ್ಥಿ ಅನುತ್ತೀರ್ಣನಾಗಿದ್ದಾನೆ. ವಾಣಿಜ್ಯ ವಿಭಾಗದ ಫಲಿತಾಂಶ ಶೇಕಡಾ 97.5% ಆಗಿದೆ.

ಒಟ್ಟಾರೆ 48 ವಿದ್ಯಾರ್ಥಿಗಳಲ್ಲಿ 47 ಮಂದಿ ಉತ್ತೀರ್ಣರಾಗಿದ್ದು, 33 ಮಂದಿ ಪ್ರಥಮ ದರ್ಜೆ ಹಾಗೂ 5 ಮಂದಿ ಎರಡನೇ ತರಗತಿಯಲ್ಲಿ ತೇರ್ಗಡೆಯಾಗಿದ್ದಾರೆ. ಕೇವಲ 1 ವಿದ್ಯಾರ್ಥಿ ಅನುತ್ತೀರ್ಣನಾಗಿದ್ದಾನೆ.

ಇದೇ ವೇಳೆ, ಕಾಲೇಜಿನ ವಿದ್ಯಾರ್ಥಿನಿ ಎಂ.ಜಿ. ಅನುಷಾ EBAC ಸಂಯೋಜನೆಯಲ್ಲಿ ಶೇಕಡಾ 97.5% ಅಂಕಗಳನ್ನು ಪಡೆದು ವಿಶೇಷ ಸಾಧನೆ ಮಾಡಿದ್ದಾರೆ. ಹಾಗೆಯೇ, ವಿದ್ಯಾರ್ಥಿನಿ ಶೈಬಾ ತಾಂಝಿಯಾ EBAC ಸಂಯೋಜನೆಯಲ್ಲಿ ಶೇಕಡಾ 90% ಅಂಕಗಳನ್ನು ಪಡೆದು ಗಮನಾರ್ಹ ಸಾಧನೆ ತೋರಿದ್ದಾರೆ.

ಇವರ ಸಾಧನೆಗೆ ಕಾಲೇಜಿನ ವ್ಯವಸ್ಥಾಪಕರು, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0