Kodagu

ಶನಿವಾರಸಂತೆ: ರೋಟರಿ ಕ್ಲಬ್ ವತಿಯಿಂದ ಸರ್ಕಾರಿ ಶಾಲೆಗೆ ಶಾಲೆಗೆ ವಾಟರ್ ಫಿಲ್ಟರ್ ಕೊಡುಗೆ

admincoorgdaily

ಶನಿವಾರಸಂತೆ :ಆಲೂರು ಸಿದ್ದಾಪುರ ಮಲ್ಲೇಶ್ವರ ರೋಟರಿ ಕ್ಲಬ್ ವತಿಯಿಂದ ಬದಬನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವಾಟರ್ ಫಿಲ್ಟರ್ ಅನ್ನು ಕೊಡುಗೆಯಾಗಿ ನೀಡಿದರು. ರೋಟರಿ ಕ್ಲಬ್ ಅಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ ರೋಟರಿ ಕ್ಲಬ್ ಸಮಾಜ ಮುಖಿ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದೆ. ಇದರ ಜೊತೆಗೆ ಸರ್ಕಾರಿ ಅಂಗನವಾಡಿ ಹಾಗೂ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಲು ಬೇರೆಬೇರೆ ರೀತಿಯಲ್ಲಿ ಸಹಕಾರ ನೀಡುತಿದೆ ಎಂದರು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ ಕಿರಣ್, ಮುಂದಿನ ಸಾಲಿನ ರೋಟರಿ ಅಧ್ಯಕ್ಷ ಸಂಪತ್ ಕುಮಾರ್ ಸದಸ್ಯರುಗಳಾದ ತಮ್ಮಯ್ಯ, ವೆಂಕಟೇಶ್, ಜಿತೇಂದ್ರ, ಸತೀಶ್ ಶಾಲಾ ಮುಖ್ಯ ಶಿಕ್ಷಕ ರಾಜ್ ಕುಮಾರ್, ಶಿಕ್ಷಕ ವೃಂದದವರು, ಎಸ್ ಡಿ ಎಂ ಸಿ ಸದಸ್ಯರುಗಳು, ಪೋಷಕ ವೃಂದದವರು, ಹಾಗೂ ಶಾಲಾ ಮಕ್ಕಳು ಹಾಜರಿದ್ದರು.