Kodagu

ಗೋಣಿಕೊಪ್ಪ; ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ

admincoorgdaily

ಗೋಣಿಕೊಪ್ಪ; ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ

ಗೋಣಿಕೊಪ್ಪ: ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಗುಲಾಬಿ ನೀಡುವ ಮೂಲಕ ಮೊದಲ ದಿನದ ಶಾಲೆ ಪ್ರಾರಂಭಕ್ಕೆ ಸ್ವಾಗತಿಸಲಾಯಿತು.ನಂತರ ವಿದ್ಯಾರ್ಥಿಗಳಿಗೆ ಸಿಹಿ ಹಂಚಿ ಶಾಲೆಯ ಪ್ರಾರಂಭೋತ್ಸವದ ಮಹತ್ವವನ್ನು ತಿಳಿಸಲಾಯಿತು.

ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯ ಬಿ.ಎನ್ ಪ್ರಕಾಶ್ ಮಕ್ಕಳಿಗೆ ಪಠ್ಯಪುಸ್ತಕ ಹಾಗೂ ನೋಟ್ ಪುಸ್ತಕಗಳನ್ನ ಹಂಚಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಆನಂದ್ ಅವರು ಮಕ್ಕಳ ಶಿಕ್ಷಣ ಚಟುವಟಿಕೆಯಾ ಪ್ರಾರಂಭಕ್ಕೆ ಶುಭ ಕೋರಿ ಮಕ್ಕಳನ್ನು ಹಾರೈಸುವುದರ ಜೊತೆಗೆ ಪಠ್ಯ ಪುಸ್ತಕಗಳನ್ನು ಹಂಚಿದರು.

ವಿದ್ಯಾರ್ಥಿಗಳು , ಶಿಕ್ಷಕರು, ಪೋಷಕರು ಎಸ್‌ಡಿಎಂಸಿ ಸದಸ್ಯರುಗಳು ಶಾಲೆಯ ಆವರಣದಿಂದ ಗೋಣಿಕೊಪ್ಪ ಬಸ್ ನಿಲ್ದಾಣದವರೆಗೆ ಮುಖ್ಯ ಶಿಕ್ಷಕ ಹೆಚ್. ಕೆ ಕುಮಾರ್ ಅವರ ಮುಂದಾಳತ್ವದಲ್ಲಿ ಮೆರವಣಿಗೆ ನಡೆಸಿ ಶಾಲೆಯ ದಾಖಲಾತಿ ಆಂದೋಲನ ನಡೆಸಿದರು.ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ಜಗದೀಶ್ ಜೋಡುಬೀಟಿ. ಉಪಾಧ್ಯಕ್ಷೆ ದಿವ್ಯಾ ಇದ್ದರು.