Kodagu

ನಿಯಮ ಉಲ್ಲಂಘಿಸಿ ಶಾಲಾ ಟ್ರಿಪ್: ಮಡಿಕೇರಿ ಸಂತ ಜೋಸೆಫ್ ಶಾಲೆಯ ಸಮೀಪ ಆರ್.ಟಿ.ಓ ಕಾರ್ಯಾಚರಣೆ

admincoorgdaily

ನಿಯಮ ಉಲ್ಲಂಘಿಸಿ ಶಾಲಾ ಟ್ರಿಪ್: ಮಡಿಕೇರಿ ಸಂತ ಜೋಸೆಫ್ ಶಾಲೆಯ ಸಮೀಪ ಆರ್.ಟಿ.ಓ ಕಾರ್ಯಾಚರಣೆ

ಮಡಿಕೇರಿ: ಶಾಲಾ ಟ್ರಿಪ್ ಹೆಸರಿನಲ್ಲಿ ನಿಯಮ ಉಲ್ಲಂಘಿಸಿ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ವಾಹನಗಳ ವಿರುದ್ಧ ಆರ್‌ಟಿಓ ಅಧಿಕಾರಿಗಳು ದಂಡಂ ದಶಗುಣಂ ಕಾರ್ಯಾಚರಣೆ ನಡೆಸಿದ್ದಾರೆ.

ಸಂತ ಜೋಸೆಫ್ ಶಾಲಾ ಆವರಣದಲ್ಲಿಆರ್‌ಟಿಓ ಅಧಿಕಾರಿಗಳು ದಿಢೀರ್ ತಪಾಸಣೆ ನಡೆಸಿದರು. ಶಾಲಾ ಟ್ರಿಪ್ ಗೆ ತೆರಳಲು ಸಜ್ಜಾಗಿದ್ದ ಹಲವು ವಾಹನಗಳನ್ನು ತಡೆದು ದಾಖಲೆ ಪರಿಶೀಲನೆ ಮಾಡಲಾಯಿತು. ವಿದ್ಯಾರ್ಥಿಗಳ ಸುರಕ್ಷತೆಯೇ ಮುಖ್ಯ. ನಿಯಮ ಪಾಲಿಸದ ಶಾಲೆಗಳು ಮತ್ತು ವಾಹನ ಮಾಲೀಕರ ವಿರುದ್ಧ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆರ್‌ಟಿಓ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.