ದ್ವಿತೀಯ ಪಿಯುಸಿ ಫಲಿತಾಂಶ; ನಾಪೋಕ್ಲುವಿನ ಕೊಂಡೀರ ಸರ್ವಿಕಾಗೆ ವಿಜ್ಞಾನ ವಿಭಾಗದಲ್ಲಿ 580 ಅಂಕ
admincoorgdaily

ವರದಿ :ಝಕರಿಯ ನಾಪೋಕ್ಲು
ನಾಪೋಕ್ಲು : ದಕ್ಷಿಣ ಕನ್ನಡ ಜಿಲ್ಲೆಯ ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ನಾಪೋಕ್ಲುವಿನ ಕೆ.ಕೆ.ಸರ್ವಿಕಾ 600ಕ್ಕೆ580 ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಗೊಂಡು ಸಾಧನೆ ಮಾಡಿದ್ದಾಳೆ.
ಸರ್ವಿಕಾ ನಾಪೋಕ್ಲು ಬೇತು ಗ್ರಾಮದ ನಿವಾಸಿ ಕೊಂಡೀರ ಕಿಶನ್ ಕಾರ್ಯಪ್ಪ ಹಾಗೂ ಕಾವ್ಯ ಕಾವೇರಮ್ಮ ದಂಪತಿಗಳ ಪುತ್ರಿ.