ದ್ವಿತೀಯ ಪಿಯುಸಿ ಫಲಿತಾಂಶ; ಪೆರುಂಬಾಡಿ ಶಂಸುಲ್ ಉಲಮಾ ಎಜುಕೇಶನ್ ಅಕಾಡೆಮಿ ಶಾಲೆಗೆ ಶೇ100% ರಿಸಲ್ಟ್

Apr 11, 2026 - 06:21
 0  63
ದ್ವಿತೀಯ ಪಿಯುಸಿ ಫಲಿತಾಂಶ; ಪೆರುಂಬಾಡಿ ಶಂಸುಲ್ ಉಲಮಾ ಎಜುಕೇಶನ್ ಅಕಾಡೆಮಿ ಶಾಲೆಗೆ ಶೇ100% ರಿಸಲ್ಟ್

ವರದಿ :ಝಕರಿಯ ನಾಪೋಕ್ಲು

 ರಾಜ್ಯದ್ಯಂತ 2025 -26 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು ವಿರಾಜಪೇಟೆ ಸಮೀಪದ ಅರ್ಜಿ ಗ್ರಾಮದ ಪೆರುಂಬಾಡಿ ಶಂಸುಲ್ ಉಲಮಾ ಎಜುಕೇಶನ್ ಅಕಾಡೆಮಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿಯಲ್ಲಿ ಶೇ.100 ಫಲಿತಾಂಶ ದೊರೆತಿದೆ.

ಪೆರುಂಬಾಡಿ ಎಸ್ಇಎ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಆಯಿಷತುಲ್ ಅಫ್ರಾ ಟಿ.ಎಸ್.600 ಕ್ಕೆ 588 ಅಂಕ ಪಡೆದು ಜಿಲ್ಲೆಗೆ 3ನೇ ಸ್ಥಾನ, ವಿರಾಜಪೇಟೆ ತಾಲೂಕಿಗೆ ಮೊದಲನೇ ಸ್ಥಾನ ಹಾಗೂ ಶಾಲೆಗೆ ಮೊದಲ ಸ್ಥಾನ ಪಡೆದು ಕೊಂಡಿದ್ದಾರೆ. ಇದೇ ಕಾಲೇಜಿನ ಫಾತಿಮತ್ ಫಿದಾ ಸಿ.ಎ.ವಾಣಿಜ್ಯ ವಿಭಾಗದಲ್ಲಿ 600 ಕ್ಕೆ 581 ಅಂಕ ಪಡೆದು ಶಾಲೆಗೆ ದ್ವಿತೀಯ ಸ್ಥಾನ ಹಾಗೂ ರಂಶೀನ ಕೆ.ಎಂ. ವಾಣಿಜ್ಯ ವಿಭಾಗದಲ್ಲಿ 600 ಕ್ಕೆ 580 ಅಂಕ ಪಡೆದು ಶಾಲೆಗೆ ಮೂರನೇ ಸ್ಥಾನ ಪಡೆದು ಕೊಂಡಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0