ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಯ ಆಯ್ಕೆಪಟ್ಟಿ ಪ್ರಕಟ

Jun 17, 2026 - 19:46
 0  742
ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಯ ಆಯ್ಕೆಪಟ್ಟಿ ಪ್ರಕಟ

ಮಡಿಕೇರಿ ಜೂ.17:-ಅಂಗನವಾಡಿ ಕಾರ್ಯರ್ತೆ ಹಾಗೂ ಸಹಾಯಕಿಯರ ನೇಮಕಾತಿ ಪ್ರಕಟಣೆ ಸಂಬಂಧ ಶಿಶು ಅಭಿವೃದ್ದಿ ಯೋಜನೆ, ಪೊನ್ನಂಪೇಟೆಯ ಮತ್ತು ವಿರಾಜಪೇಟೆ ತಾಲ್ಲೂಕಿಗೆ ಒಳಪಟ್ಟಂತೆ ಪೊನ್ನಂಪೇಟೆ ತಾಲ್ಲೂಕಿನ 08 ಅಂಗನವಾಡಿ ಕಾರ್ಯಕರ್ತೆ ಹುದ್ದೆ ಮತ್ತು 37 ಸಹಾಯಕಿ ಹುದ್ದೆಗೆ ಮತ್ತು ವಿರಾಜಪೇಟೆ ತಾಲೂಕು ವ್ಯಾಪ್ತಿಗೆ ಒಳಪಟ್ಟಂತೆ 13 ಅಂಗನವಾಡಿ ಕಾರ್ಯಕರ್ತೆ ಹುದ್ದೆ ಮತ್ತು 24 ಸಹಾಯಕಿ ಹುದ್ದೆಗೆ 2026 ರ ಮೇ, 18 ರಂದು ಆಯ್ಕೆ ಪ್ರಕ್ರಿಯೆ ನಡೆಸಲಾಗಿದೆ.

 ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಕಚೇರಿಯ ಪ್ರಕಟಣಾ ಫಲಕದಲ್ಲಿ ಪ್ರಕಟಿಸಿದೆ. ಈ ಬಗ್ಗೆ ಸಂಬಂಧಿಸಿದವರಿಗೆ ಆಕ್ಷೇಪಣೆ ಏನಾದರೂ ಇದ್ದಲ್ಲಿ ಜೂನ್, 22 ರ ಸಂಜೆ 5.30ರ ಒಳಗೆ ಈ ಕಚೇರಿಗೆ ಸಲ್ಲಿಸಬೇಕು ಎಂದು ಪೊನ್ನಂಪೇಟೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅವರು ತಿಳಿಸಿದ್ದಾರೆ.

What's Your Reaction?

Like Like 1
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0