ವಿಜಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿ ನಾಯಕರ ಆಯ್ಕೆ

ವಿಜಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿ ನಾಯಕರ ಆಯ್ಕೆ

ಕಡಂಗ: ಸ್ಥಳೀಯ ವಿಜಯ ಆಂಗ್ಲ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ 2025 -26 ನೇ ಸಾಲಿನ ಶೈಕ್ಷಣಿಕ ಸಂಸತ್ ರಚನೆ ಕಾರ್ಯಕ್ರಮ ನಡೆಯಿತು. ಮತದಾನ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿದರು .ಚುನಾಯಿತ ಪ್ರತಿನಿಧಿಗಳನ್ನು ಶಾಲಾ ವತಿಯಿಂದ ವಿಶೇಷ ಅಭಿನಂದನಾ ಸಮಾರಂಭವನ್ನು ಏರ್ಪಡಿಸಿ ಗೌರವಿಸಲಾಯಿತು. ಶಾಲಾ ನಾಯಕಿಯಾಗಿ ಹಮ್ನಾ ಫಾತಿಮಾ, ಉಪನಾಯಕನಾಗಿ ಮೊಹಮ್ಮದ್ ಸಲ್ಮಾನ್, ಆರೋಗ್ಯ ವಿಭಾಗದಲ್ಲಿ ದೀಪಿಕಾ, ಕ್ರೀಡಾ ವಿಭಾಗದಲ್ಲಿ ಅಫೀರ್, ಉಪ ಕ್ರೀಡಾ ವಿಭಾಗದಲ್ಲಿ ಸೈಬಾ,ಸ್ವಚ್ಛತಾ ವಿಭಾಗದಲ್ಲಿ ಸನಾ, ಸಾಂಸ್ಕೃತಿಕ ವಿಭಾಗದಲ್ಲಿ ಜುಮಾನ ಹಾಗೂ ಅದೆಶ್ ಅಪ್ಪಣ್ಣ ರವರನ್ನು ಆಯ್ಕೆ ಮಾಡಲಾಯಿತು.

ಮತದಾನದ ಮೂಲಕ ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸುವಲ್ಲಿ ಶಾಲೆಯ ಸಂಸತ್ ರಚನೆ ಉಪಕಾರಿಯಾಗುತ್ತದೆ ಎಂದು ಮುಖ್ಯ ಶಿಕ್ಷಕಿ ಭೋಜಮ್ಮ ಹೇಳಿದರು. ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಹಾಜರಿದ್ದರು.