ಏ 6 ಮತ್ತು 7ರಂದು ಕೊಡಗು ಕ್ರಿಕೆಟ್ ತಂಡಕ್ಕೆ ಆಯ್ಕೆ ಪ್ರಕ್ರಿಯೆ
admincoorgdaily

ಮಡಿಕೇರಿ: ಮಂಗಳೂರು ವಿಭಾಗದ ಕೊಡಗು ಕ್ರಿಕೆಟ್ ತಂಡಗಳ ರಚನೆಗೆ ಪ್ರತಿಭಾವಂತ ಆಟಗಾರರ ಆಯ್ಕೆ ಪ್ರಕ್ರಿಯೆ ಮರಗೋಡು ಶಾಲಾ ಮೈದಾನದಲ್ಲಿ ಏ.೬ ಮತ್ತು ೭ ರಂದು ನಡೆಯಲಿದೆ ಎಂದು ಮಡಿಕೇರಿ ಯೂತ್ ಕ್ರಿಕೆಟ್ ಕ್ಲಬ್ ಅಧ್ಯಕ್ಷ ಪೊನ್ನಚ್ಚನ ಮಧು ಸೋಮಣ್ಣ ತಿಳಿಸಿದರು.
ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ ಸಹಕಾರದೊಂದಿಗೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಆಯ್ಕೆ ಪ್ರಕ್ರಿಯೆ ವಿವಿಧ ವಿಭಾಗದಲ್ಲಿ ನಡೆಯಲಿದೆ. ಏ.೬ರಂದು ಬಾಲಕರ ೧೪, ೧೬, ೧೯ ವರ್ಷದೊಳಗಿನ ತಂಡ ರಚನೆಗೆ ಆಟಗಾರರ ಆಯ್ಕೆ ನಡೆಯಲಿದೆ.
ಏ.೭ರಂದು ಬಾಲಕಿಯರ ೧೫, ೧೯ ವರ್ಷದೊಳಗಿನ ಆಟಗಾರರ ಆಯ್ಕೆ ನಡೆಯಲಿದೆ. ಪ್ರತಿದಿನ ಬೆಳಗ್ಗೆ ೯ರಿಂದ ಮಧ್ಯಾಹ್ನ ೩ ಗಂಟೆ ವರೆಗೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಆಸಕ್ತ ಆಟಗಾರರು 9880381831, 9945056373 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಡಿಕೇರಿ ಯೂತ್ ಕ್ರಿಕೆಟ್ ಕ್ಲಬ್‌ನ ಪ್ರಮುಖರಾದ ಪ್ರಿನ್ಸ್‌ಕುಟ್ಟಪ್ಪ, ಸುನಿಲ್, ಅಜಯ್, ಉಪಸ್ಥಿತರಿದ್ದರು.