Kodagu

ಸೆ.05 ಕೊಡಗು ಸೌಹಾರ್ದ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

admincoorgdaily

ಮಡಿಕೇರಿ: ಕೊಡಗು ಸೌಹಾರ್ದ ಪತ್ತಿನ ಸಹಕಾರಿ ಸಂಘ 2024-2025ರ ಸಾಲಿನ ವಾರ್ಷಿಕ ಮಹಾಸಭೆ ಸೆ.5 ರಂದು ನಗರದ ಕೊಡವ ಸಮಾಜ ಸಭಾಂಗಣದಲ್ಲಿ ನಡೆಯಲಿದೆ ಎಂದು ಎಂದು ಸಂಘದ ಅಧ್ಯಕ್ಷ ಮಂಡುವಂಡ.ಪಿ.ಮುತ್ತಪ್ಪ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 11 ಗಂಟೆಗೆ ಸಂಘದ ಅಧ್ಯಕ್ಷ ಮಂಡುವಂಡ.ಪಿ.ಮುತ್ತಪ್ಪ ಅಧ್ಯಕ್ಷತೆಯಲ್ಲಿ ಮಹಾಸಭೆ ನಡೆಯಲಿದೆ. ಮಹಾಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು. ಸಹಕಾರಿ ಸಂಘ 2024-2025ರ ಸಾಲಿನಲ್ಲಿ ರೂ.28.96 ಲಕ್ಷ ಲಾಭಗಳಿಸಿದೆ. ಸಂಘದಲ್ಲಿ 2143 ಸದಸ್ಯರಿದ್ದು, ಒಟ್ಟು 856.96 ಕೋಟಿ ದುಡಿಯುವ ಬಂಡವಾಳವಿದೆ. 2024-2025ರ ಸಾಲಿನಲ್ಲಿ ರೂ.4.50 ಕೋಟಿ ಸಾಲ ನೀಡಲಾಗಿದೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಿ.ಸಿ.ನೀಮಾ, ಉಪಾಧ್ಯಕ್ಷ ಕುಡುವಂಡ.ಬಿ.ಉತ್ತಪ್ಪ, ನಿರ್ದೇಶಕರಾದ ನಂದೇಟಿರ.ಪಿ.ರಾಜಮಾದಪ್ಪ, ಕೇಕಡ.ಯು.ಸುಗುಣ, ಅಂಜಪರವಂಡ.ಜಿ.ಉಷಾ ಇದ್ದರು.