7ನೇ ಹೊಸಕೋಟೆಯಲ್ಲಿ ಸರಣಿ ಅಪಘಾತ

Aug 5, 2026 - 10:38
 0  613
7ನೇ ಹೊಸಕೋಟೆಯಲ್ಲಿ ಸರಣಿ ಅಪಘಾತ

ಕುಶಾಲನಗರ:ಸುಂಟಿಕೊಪ್ಪ-ಕುಶಾಲನಗರ ರಾಜ್ಯ ಹೆದ್ದಾರಿಯ 7ನೇ ಹೊಸಕೋಟೆ ಬಳಿ ಇಂದು ಬೆಳಿಗ್ಗೆ ಎರಡು ಕಾರು ಮತ್ತು KSRTC ಬಸ್ ನಡುವೆ ಸರಣಿ ಅಪಘಾತ ಸಂಭವಿಸಿದೆ.

 ಪೊಲೀಸ್ ಮೂಲಗಳ ಪ್ರಕಾರ, ಸುಂಟಿಕೊಪ್ಪದ ಮಾತಾಜಿ ಜ್ಯೂವೆಲ್ಲರ್ಸ್ ಮಾಲೀಕ ರಮೇಶ್ ಶೇಟ್ ಅವರು ರಿಟ್ಜ್ ಕಾರಿನಲ್ಲಿ ಕುಶಾಲನಗರ ಕಡೆಯಿಂದ ಸುಂಟಿಕೊಪ್ಪ ಕಡೆಗೆ ಬರುತ್ತಿದ್ದರು. ಕಲ್ಲುಕೋರೆ ರಸ್ತೆಗೆ ತಿರುವು ಪಡೆಯುತ್ತಿದ್ದ ವೇಳೆ ಹಿಂಬದಿಯಿಂದ ವೇಗವಾಗಿ ಬಂದ KSRTC ಬಸ್ ಕಾರಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಎದುರಿನಿಂದ ಸುಂಟಿಕೊಪ್ಪ ಕಡೆಯಿಂದ ಬರುತ್ತಿದ್ದ ಬಲೆನೋ ಕಾರು ಕೂಡ ರಮೇಶ್ ಶೇಟ್ ಅವರ ರಿಟ್ಜ್ ಕಾರಿಗೆ ಡಿಕ್ಕಿಯಾಗಿದೆ. ರಭಸದ ಈ ಡಿಕ್ಕಿಯಲ್ಲಿ ರಿಟ್ಜ್ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಅದೃಷ್ಟವಶಾತ್ ಮೂರು ವಾಹನಗಳಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0