ವೀರಾಜಪೇಟೆಯಲ್ಲಿ ಸರಣಿ ಅಪಘಾತ

Mar 2, 2026 - 19:27
 0  2.6k
ವೀರಾಜಪೇಟೆಯಲ್ಲಿ ಸರಣಿ ಅಪಘಾತ

ವೀರಾಜಪೇಟೆ,: ಪಟ್ಟಣದ ಸಮೀಪದ ಮಠದಗದ್ದೆ ಬಳಿಯ ಮುಖ್ಯ ರಸ್ತೆಯಲ್ಲಿ ಸರಣಿ ಅಪಘಾತ ಸಂಭವಿಸಿದ್ದು, ವಾಹನಗಳು ಜಖಂಗೊಂಡಿವೆ.

ಖಾಸಗಿ ಬಸ್, ಸ್ವಿಫ್ಟ್ ಕಾರು, ಮತ್ತು ಬೊಲೆರೋ ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿದೆ. ಬವೀರಾಜಪೇಟೆಯಿಂದ ಬೆಳಿಗ್ಗೆ ೧೧-೧೫ಕ್ಕೆ ಮಡಿಕೇರಿ ಕಡೆಗೆ ಹೊಗುತ್ತಿದ್ದ ಖಾಸಗಿ ಬಸ್ ಮಹಿಳಾ ಸಮಾಜದ ಕಡೆಯಿಂದ ಎಡಬದಿ ತಿರುವಿನಲ್ಲಿ ಬರುತ್ತಿದ್ದ ಬೊಲೇರ ವಾಹನಕ್ಕೆ ಡಿಕ್ಕಿಯಾಗಿದೆ. ಈ ವೇಳೆ ಎದುರಿನಿಂದ ಬರುತಿದ್ದ ಸ್ವಿಫ್ಟ್ ಕಾರಿಗೂ ಡಿಕ್ಕಿಯಾಗಿದೆ.

ಘಟನೆಯಿಂದ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಯಿತು. ಮುಖ್ಯ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ವಾಹನವನ್ನು ತೆರವುಗೊಳಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಈ ಸಂಬಂಧ ವೀರಾಜಪೇಟೆ ನಗರ ಠಾಣೆ ಪೊಲೀಸರು ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

What's Your Reaction?

Like Like 1
Dislike Dislike 1
Love Love 1
Funny Funny 0
Angry Angry 0
Sad Sad 4
Wow Wow 0