ಬುದ್ಧಿಮಾಂದ್ಯ ಮಹಿಳೆ ಮೇಲೆ ಅತ್ಯಾಚಾರ ಎಸಗಿ ವಿಡಿಯೋ ಹರಿಬಿಟ್ಟ ಕಾಮುಕರು

Aug 9, 2025 - 10:57
 0  483
ಬುದ್ಧಿಮಾಂದ್ಯ ಮಹಿಳೆ ಮೇಲೆ ಅತ್ಯಾಚಾರ ಎಸಗಿ ವಿಡಿಯೋ ಹರಿಬಿಟ್ಟ ಕಾಮುಕರು

ಹಾಸನ: ನಗರದ ಪೆನ್ಷನ್ ಮೊಹಲ್ಲಾ ಠಾಣೆ ವ್ಯಾಪ್ತಿಯಲ್ಲಿ ಬುದ್ದಿಮಾಂಧ್ಯ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿ ವಿಡಿಯೋ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಪ್ರಕರಣ ಬೆಳಕಿಗೆ ಬಂದಿದೆ. ಈ ಘಟನೆ ಯಾವಾಗ ನಡೆದಿದೆ ಎಂಬುದು ಇನ್ನೂ ತಿಳಿದು ಬಂದಿಲ್ಲ. ಆದರೆ ಆ. 8 ರಂದು ವಾಟ್ಸಾಪ್ ಮೂಲಕ ಅಸಹ್ಯಕರ ವಿಡಿಯೋಗಳು ಸಂತ್ರಸ್ತ ಮಹಿಳೆಯ ಸಹೋದರನಿಗೆ ಬಂದಿವೆ.

ವಿಡಿಯೋ ಕಳುಹಿಸಿದ ವ್ಯಕ್ತಿಯನ್ನು ವಿಚಾರಿಸಿದಾಗ ಆತ ಮತ್ತೊಬ್ಬನ ಹೆಸರು ಹೇಳಿ ಡಿಲೀಟ್ ಮಾಡಿದ್ದಾನೆ. ಚಿಕ್ಕನಾಳು ನಿವಾಸಿ ಅಬ್ದುಲ್ ಆಪ್ರಾಬ್ ಎಂಬಾತ ಅತ್ಯಾಚಾರ ಎಸಗಿರುವುದು ಕಂಡುಬಂದಿದೆ. ಮತ್ತೊಬ್ಬ ಇಲಾಹಿ ನಗರದ ರಾಜಿಕ್ ಪಾಷ ಅಲ್ಲಿಯೇ ಇರುವುದು ಸೆರೆಯಾಗಿದೆ‌. ಬುದ್ದಿಮಾಂಧ್ಯ ಸಹೋದರಿ ಮೇಲೆ ಅತ್ಯಾಚಾರ ಎಸಗಿರುವುದು ಮಾತ್ರವಲ್ಲದೆ ವಿಡಿಯೋ ಹರಿಬಿಟ್ಟು ಸಮಾಜದಲ್ಲಿ ತಲೆ ಎತ್ತದಂತೆ ಮಾಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕೆಂದು ಮಹಿಳೆ ಸಹೋದರ ಆಗ್ರಹಿಸಿದ್ದಾರೆ.

What's Your Reaction?

Like Like 1
Dislike Dislike 1
Love Love 0
Funny Funny 0
Angry Angry 3
Sad Sad 3
Wow Wow 0