ಶನಿವಾರಸಂತೆ:ವಿದ್ಯಾರ್ಥಿ ಮೇಲೆ ಅತ್ಯಾಚಾರಕ್ಕೆ ಯತ್ನ ,ಆರೋಪಿ ವಶಕ್ಕೆ

Aug 21, 2025 - 15:38
 0  1.7k
ಶನಿವಾರಸಂತೆ:ವಿದ್ಯಾರ್ಥಿ ಮೇಲೆ ಅತ್ಯಾಚಾರಕ್ಕೆ ಯತ್ನ ,ಆರೋಪಿ ವಶಕ್ಕೆ

ಸೋಮವಾರಪೇಟೆ: ತಾಲೂಕಿನ ಶನಿವಾರಸಂತೆ ಸಮೀಪದ ದುಂಡಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಿರಿಬಿಳಹ ಗ್ರಾಮದ ಲೋಕೇಶ್ ಅಲಿಯಾಸ್ ಪುಟ್ಟ ಬುಧವಾರ ಸಂಜೆ ಶನಿವಾರಸಂತೆ ಶಾಲೆಯೊಂದರ ವಿದ್ಯಾರ್ಥಿನಿ ಶಾಲೆ ಮುಗಿಸಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಕಾದು ಕುಳಿತು ಲೋಕೇಶ್ ಅಲಿಯಾಸ್ ಪುಟ್ಟ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಕೂಗಿಕೊಂಡಾಗ ಸ್ಥಳೀಯರು ವಿದ್ಯಾರ್ಥಿನಿಯನ್ನು ರಕ್ಷಿಸಿ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

What's Your Reaction?

Like Like 3
Dislike Dislike 1
Love Love 2
Funny Funny 1
Angry Angry 2
Sad Sad 4
Wow Wow 0