Kodagu

ಶನಿವಾರಸಂತೆ:ಭಾರೀ ಮಳೆ-ಗಾಳಿಗೆ ಮರಬಿದ್ದು ಸಂಚಾರಕ್ಕೆ ಅಡಚಣೆ

admincoorgdaily

ಶನಿವಾರಸಂತೆ:ಭಾರೀ ಮಳೆ-ಗಾಳಿಗೆ ಮರಬಿದ್ದು ಸಂಚಾರಕ್ಕೆ ಅಡಚಣೆ

ಶನಿವಾರಸಂತೆ:ಶನಿವಾರಸಂತೆ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ಬಾರಿ ಗಾಳಿ ಮಳೆಯಾಗಿದೆ. ಇದರ ಪರಿಣಾಮ ಶನಿವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಶನಿವಾರಸಂತೆ, ಕುಶಾಲನಗರ, ಸೋಮವಾರಪೇಟೆ ರಾಜ್ಯ ಹೆದ್ದಾರಿಯ ಗೋಪಾಲಪುರ ಚರ್ಚ್ ಸಮೀಪದಲ್ಲಿ ಹೆದ್ದಾರಿ ಬದಿಯಲ್ಲಿ ಬಾರಿ ಗಾತ್ರದ ಆಲದ ಮರವೊಂದು ಬುಡ ಸಮೇತವಾಗಿ ರಸ್ತೆಗೆ ಬಿದ್ದಿದೆ.

 ಅದೃಷ್ಟವಶಾತ್ ಈ ವೇಳೆಯಲ್ಲಿ ಸಂಚರಿಸುತ್ತಿದ್ದ ದ್ವಿಚಕ್ರ ವಾಹನ ಸೇರಿದಂತೆ ಹಲವು ವಾಹನಗಳು ಅವಘಡದಿಂದ ಪಾರಾಗಿವೆ ಎಂದು ಮರ ಬೀಳುತ್ತಿರುವುದನ್ನು ಗಮನಿಸುತ್ತಿದ್ದ ಸ್ಥಳೀಯರು ಹೇಳಿದರು. ಬೃಹತ್ ಗಾತ್ರದ ಮರ ಬಿದ್ದ ಪರಿಣಾಮ ವಿದ್ಯುತ್ ಕಂಬವೊಂದು ಮುರಿದು ಬಿದ್ದಿದೆ. ಮಾಹಿತಿ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ, ವಿದ್ಯುತ್ ಇಲಾಖೆ ಸಿಬ್ಬಂದಿ, ವಿಪತ್ತು ನಿಗ್ರಹ ಸಿಬ್ಬಂದಿ ಮತ್ತು ಸ್ಥಳೀಯರು ರಸ್ತೆಗೆ ಅಡ್ಡಲಾಗಿ ಬಿದ್ದ ಮರವನ್ನು ತೆರವುಗೊಳಿಸಿದರು.ಇದರಿಂದ ಸುಮಾರು 2 ಗಂಟೆಯ ಕಾಲ ವಾಹನ ಸಂಚಾರ ಸ್ಥಗಿತಗೊಂಡು ಬದಲಿ ರಸ್ತೆ ಮೂಲಕ ವಾಹನಗಳು ಸಂಚರಿಸುತ್ತಿದ್ದವು.