ಶಿರಂಗಾಲ:ರಸ್ತೆ ಅಪಘಾತ,ಬೈಕ್ ಚಾಲಕ ಸ್ಥಳದಲ್ಲಿಯೇ ಮೃತ್ಯು

ಶಿರಂಗಾಲ:ರಸ್ತೆ ಅಪಘಾತ,ಬೈಕ್ ಚಾಲಕ ಸ್ಥಳದಲ್ಲಿಯೇ ಮೃತ್ಯು

ಕುಶಾಲನಗರ:ಶಿರಂಗಾಲ ಶ್ರೀ ಮಂಟಿಗಮ್ಮ ದೇವಾಲಯ ಪ್ರವೇಶದ್ವಾರದ ತಿರುವಿನಲ್ಲಿ ಬುಧವಾರ ಬೆಳಗ್ಗೆ ನಡೆದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ. ಪಿರಿಯಾಪಟ್ಟಣ ತಾಲ್ಲೂಕು ಕಣಗಾಲು ಹೋಬಳಿಯ ಚಾಮರಾಯನಕೋಟೆ ಗ್ರಾಮದ ನಿವಾಸಿ ಅಶೋಕ್(36) ಮೃತ ದುರ್ದೈವಿಯಾಗಿದ್ದಾನೆ. ಕೊಣನೂರು ಕಡೆಯಿಂದ ಕುಶಾಲನಗರ ಕಡೆಗೆ ಬರುತ್ತಿದ್ದ ಲಾರಿ ಹಾಗೂ ಶಿರಂಗಾಲದಿಂದ ಕೊಣನೂರು ಕಡೆಗೆ ಹೋಗುತ್ತಿದ್ದ ಬೈಕ್ ಸ್ಕೂಟಿ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದಾನೆ. ಮೃತ ಅಶೋಕ್ ಪತ್ನಿ ರಂಜಿತಾ. ಮಕ್ಕಳದ ಸಮರ್ಥ್ ಹಾಗೂ ಸಾನ್ವಿ ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ.