ಮದ್ಯ ಪ್ರಿಯರಿಗೆ ಶಾಕ್‌ ; ಒಲ್ಡ್‌ ಮಾಂಕ್‌ ಆರ್‌ಸಿ, ಬಾಗ್‌ಪೈಪರ್‌ ವಿಸ್ಕಿ ಮಾರಾಟ ನಿಷೇಧಿಸಿದ ಎಫ್‌ಎಸ್‌ಎಸ್‌ಏಐ

Aug 5, 2026 - 10:01
 0  376
ಮದ್ಯ ಪ್ರಿಯರಿಗೆ ಶಾಕ್‌  ; ಒಲ್ಡ್‌ ಮಾಂಕ್‌  ಆರ್‌ಸಿ, ಬಾಗ್‌ಪೈಪರ್‌ ವಿಸ್ಕಿ ಮಾರಾಟ ನಿಷೇಧಿಸಿದ ಎಫ್‌ಎಸ್‌ಎಸ್‌ಏಐ

ಕೋವರ್‌ ಕೊಲ್ಲಿ ಇಂದ್ರೇಶ್‌

 ಬೆಂಗಳುರು ; ಕೃತಕ ಸುವಾಸನೆ ಬಳಕೆ ಮಾಡಿರುವ ಆರೋಪ ಹಾಗೂ ಪಾಕೆಟ್‌ ಮೇಲೆ ಬರದಿರುವ ಶೇಕಡಾ 100 ರಷ್ಟು ಶುದ್ದ ಎಂಬುದನ್ನು ಪಾಲಿಸದ ಕಾರಣದಿಂದಾಗಿ ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ಓಲ್ಡ್ ಮಾಂಕ್, ಆಂಟಿಕ್ವಿಟಿ ಬ್ಲೂ ವಿಸ್ಕಿ, ರಾಯಲ್ ಚಾಲೆಂಜ್ ವಿಸ್ಕಿ ಮತ್ತು ಬ್ಯಾಗ್‌ಪೈಪರ್ ಡಿಲಕ್ಸ್ ವಿಸ್ಕಿ ಸೇರಿದಂತೆ ಜನಪ್ರಿಯ ಮದ್ಯ ಬ್ರಾಂಡ್‌ಗಳ ಕೆಲವು ಮದ್ಯ ಮಾರಾಟವನ್ನು ನಿಷೇಧಿಸಿದೆ. ಇದಲ್ಲದೆ ಜನಪ್ರಿಯ ಆಹಾರ ಉತ್ಪನ್ನ ಮಾರಾಟಗಾರ ಡಾಬರ್‌ ಜೇನು ಹಾಗೂ ತುಪ್ಪ ಮತ್ತು ಆಹಾರ ಪದಾರ್ಥಗಳ ಮಾರಾಟವನ್ನೂ ನಿಷೇಧಿಸಿದೆ. ಡಾಬರ್‌ ಉತ್ಪನ್ನಗಳ ಲೇಬಲ್‌ ಮೇಲೆ ಶೆಕಡಾ 100 ರಷ್ಟು ನೈಸರ್ಗಿಕ ಹಾಗೂ ಪರಿಶುಧ್ದ ಎಂಬ ಘೋಷವಾಕ್ಯ ಮುದ್ರಿಸಲಾಗುತಿತ್ತು. ಆದರೆ FSSAI ನಡೆಸಿದ ಲ್ಯಾಬೋರೇಟರಿ ಪರೀಕ್ಷೆಯಲ್ಲಿ ಈ ಉತ್ಪನ್ನಗಳು ಶೇಕಡಾ 100 ರಷ್ಟು ಪರಿಶುದ್ದವಲ್ಲ , ಬಣ್ಣ ಹಾಗೂ ಸುವಾಸನೆಗೆ ಕೃತಕ ಉತ್ಪನ್ನಗಳನ್ನು ಸೇರಿಸಲಾಗಿರುವುದು ಪತ್ತೆ ಆಗಿತ್ತು. ಈ ಬೆನ್ನಲ್ಲೇ ಈ ನಿರ್ಬಂಧ ಹೇರಲಾಗಿದೆ.

ಇನ್ನು ಮದ್ಯದ ಉತ್ಪನ್ನಗಳಲ್ಲೂ ಇದೇ ರೀತಿ ಕೃತಕ ಸುವಾಸನೆ ಸೇರಿಸಲಾಗಿರುವುದನ್ನು FSSAI ಪತ್ತೆ ಮಾಡಿದ್ದು ಕೆಲ ಜನಪ್ರಿಯ ಬ್ರಾಂಡ್‌ ಗಳನ್ನೇ ನಿಷೇಧಿಸಿದೆ. ಇದು ಮದ್ಯ ಪ್ರಿಯರಿಗೆ ಶಾಕ್‌ ನೀಡಿದೆ. ಸಾಮಾನ್ಯವಾಗಿ ರಮ್ ಮತ್ತು ವಿಸ್ಕಿಯನ್ನು ಕಬ್ಬಿನ ಬೆಲ್ಲದ ರಸ, ಮಾಲ್ಟ್ ಅಥವಾ ಇತರ ನೈಸರ್ಗಿಕ ಪದಾರ್ಥಗಳಿಂದ ತಯಾರಿಸಲಾಗುತ್ತದೆ. ನಂತರ ನಿರ್ದಿಷ್ಟ ಅವಧಿಯವರೆಗೆ ಸಂಗ್ರಹಿಸಿ ಅದರ ರುಚಿ ಮತ್ತು ಸುವಾಸನೆ ಅಭಿವೃದ್ಧಿಪಡಿಸಲಾಗುತ್ತದೆ. ಆದರೆ ಕೆಲವು ಉತ್ಪನ್ನಗಳಲ್ಲಿ ನ್ಯೂಟ್ರಲ್ ಅಲ್ಕೋಹಾಲ್‌ಗೆ ಕೃತಕ ಸುವಾಸನೆ ಸೇರಿಸಿರುವುದು ಪರೀಕ್ಷೆಯಲ್ಲಿ ಪತ್ತೆಯಾಗಿದೆ ಎಂದು ವರದಿಗಳು ತಿಳಿಸಿವೆ.

ಇದರ ಜೊತೆಗೆ, ಕೃತಕ ಫ್ಲೇವರ್ ಬಳಸಿದ್ದರೂ ಲೇಬಲ್‌ನಲ್ಲಿ ಅದನ್ನು ಸ್ಪಷ್ಟವಾಗಿ ಉಲ್ಲೇಖಿಸದಿರುವುದು ಹಾಗೂ ಉತ್ಪನ್ನಗಳ ಬಗ್ಗೆ ಗ್ರಾಹಕರಿಗೆ ತಪ್ಪು ಮಾಹಿತಿ ನೀಡಿರುವ ಆರೋಪಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಕೆಲವು ಮದ್ಯದ ಬ್ರ್ಯಾಂಡ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಉದಾಹರಣೆಗೆ ರಮ್‌ ಅಥವಾ ವಿಸ್ಕಿ ತಯಾರಿಕೆಯಲ್ಲಿ ಕೃತಕ ಬಣ್ಣ ಹಾಗೂ ಸುವಾಸನೆ , ಪರಿಮಳ ಬಳಕೆ ಸಾಮಾನ್ಯವೇ ಆಗಿದೆ. ಆದರೆ ರಮ್‌ ತಯಾರಿಕೆಯಲ್ಲಿ ರಮ್‌ ನ ಸುವಾಸನೆ, ವಿಸ್ಕಿ ತಯಾರಿಕೆಯಲ್ಲಿ ವಿಸ್ಕಿಯ ಸುವಾಸನೆ ಬಳಕೆ ಮಾಡುವಂತಿಲ್ಲ. ಇದು ಆಹಾರ ಸುರಕ್ಷತಾ ಮಾನದಂಡಕ್ಕೆ ವಿರೋಧವಾಗಿದೆ ಎಂದು ಹೇಳಲಾಗಿದೆ. ಈ ಸುವಾಸನೆಯನ್ನು ಬಳಕೆ ಮಾಡಿರುವುದು ಕಾನೂನಿನ ಚೌಕಟ್ಟಿನ ಒಳಗೇ ಇದ್ದರೂ ಲೇಬಲ್‌ ನಲ್ಲಿ ಸ್ಪಷ್ಟವಾಗಿ ಕೃತಕ ಸುವಾಸನೆ ಸೇರಿಸಲಾಗಿದೆ ಎಂದು ಮುದ್ರಣ ಮಾಡಬೇಕಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

                 

ಡಯಾಜಿಯೊ ಇಂಡಿಯಾದ ಯುನೈಟೆಡ್ ಸ್ಪಿರಿಟ್ಸ್, ಇನ್‌ಬ್ರೂ ಪಾನೀಯಗಳು ಮತ್ತು ಮೋಹನ್ ರಾಕಿ ಸ್ಪ್ರಿಂಗ್‌ವಾಟರ್ ತಯಾರಿಸಿದ ಕೆಲವು ಉತ್ಪನ್ನಗಳು ನೈಸರ್ಗಿಕ ಪದಾರ್ಥಗಳು ಮತ್ತು ಸರಿಯಾದ ಪಕ್ವತೆಯ ಪ್ರಕ್ರಿಯೆಗಳನ್ನು ಅವಲಂಬಿಸುವ ಬದಲು ಆಲ್ಕೊಹಾಲ್ಯುಕ್ತ ಪಾನೀಯಗಳ ರುಚಿ ಮತ್ತು ಸುವಾಸನೆಯನ್ನು ಸಾಧಿಸಲು ಬಾಹ್ಯ ಕೃತಕ ಅಥವಾ ನೈಸರ್ಗಿಕವಾಗಿ ಹೋಲುವ ಸುವಾಸನೆಗಳನ್ನು ಬಳಸಿಕೊಂಡಿವೆ ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ತನ್ನ ಪರೀಕ್ಷೆಗಳು ಕಂಡುಕೊಂಡಿವೆ ಎಂದು ಹೇಳಿದೆ.

 

ಮಧ್ಯಪ್ರದೇಶದಲ್ಲಿ ಯುನೈಟೆಡ್ ಸ್ಪಿರಿಟ್ಸ್ ತಯಾರಿಸಿದ ಆಂಟಿಕ್ವಿಟಿ ಬ್ಲೂ ವಿಸ್ಕಿ ಮತ್ತು ರಾಯಲ್ ಚಾಲೆಂಜ್ ವಿಸ್ಕಿ. ಮಧ್ಯಪ್ರದೇಶದಲ್ಲಿ ಇನ್‌ಬ್ರೂ ಪಾನೀಯಗಳು ತಯಾರಿಸಿದ ಬ್ಯಾಗ್‌ಪೈಪರ್ ಡಿಲಕ್ಸ್ ವಿಸ್ಕಿ ಮತ್ತು ಓಲ್ಡ್ ಕ್ಯಾಸ್ಕ್ ಡಿಲಕ್ಸ್ XXX ರಮ್. ಮಹಾರಾಷ್ಟ್ರದಲ್ಲಿ ಮೋಹನ್ ರಾಕಿ ಸ್ಪ್ರಿಂಗ್‌ವಾಟರ್ ತಯಾರಿಸಿದ ಓಲ್ಡ್ ಮಾಂಕ್‌ನ ಮೂರು ಮಾದರಿಯ ರಮ್‌ ಗಳನ್ನು ನಿಷೇಧಿಸಲಾಗಿದೆ. ಈ ಜನಪ್ರಿಯ ಬ್ರಾಂಡ್‌ ಗಳು ದೇಶದ ಅನೇಕ ಕಡೆಗಳಲ್ಲಿ ತಯಾರಿಕ ಸೌಲಭ್ಯ ಹೊಂದಿರುವುದರಿಂದ ಈ ನಿರ್ದಿಷ್ಟ ಸೌಲಭ್ಯಗಳಲ್ಲಿ ತಯಾರಾದ ಉತ್ಪನ್ನಗಳಿಗೆ ಮಾತ್ರ ಕ್ರಮ ಅನ್ವಯಿಸುತ್ತದೆಯೇ ಅಥವಾ ಬೇರೆಡೆ ಉತ್ಪಾದಿಸಲಾದ ಅದೇ ಬ್ರ್ಯಾಂಡ್‌ಗಳಿಗೆ ವಿಸ್ತರಿಸುತ್ತದೆಯೇ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ.

 

"ರಮ್ ಪರಿಮಳವನ್ನು ರಮ್‌ಗೆ ಸೇರಿಸುವ ಅಥವಾ ವಿಸ್ಕಿಯ ಸುವಾಸನೆಯನ್ನು ವಿಸ್ಕಿಗೆ ಸೇರಿಸುವದರಿಂದ ಸಹಜವಾಗಿಯೇ ಅದು ಗ್ರಾಹಕರನ್ನು ತಪ್ಪು ದಾರಿಗೆ ಎಳೆಯುವಂತದ್ದಾಗಿದೆ. ಅಂತರ್ರಾಷ್ಟ್ರೀಯ ಮಟ್ಟದಲ್ಲೂ ಇಂತಹ ಬಳಕೆ ಇಲ್ಲ. ಇಂತಹ ಬಳಕೆ ತಯಾರಕರು ಸರಿಯಾದ ಪಕ್ವತೆಯನ್ನು ಅಥವಾ ಮೊಲಾಸಸ್, ಮಾಲ್ಟ್ ಅಥವಾ ದ್ರಾಕ್ಷಿಯಂತಹ ನೈಸರ್ಗಿಕ ಪದಾರ್ಥಗಳ ಬಳಕೆಯನ್ನು ಉತ್ಪಾದನಾ ಪ್ರಕ್ರಿಯೆಯಲ್ಲಿ ಬಳಸದೇ ಇರಲು ಅನುವು ಮಾಡಿಕೊಡುತ್ತದೆ ಎಂದು FSSAI ಹೇಳಿದೆ. ಈ "ಉತ್ಪನ್ನಗಳಲ್ಲಿ ಬಾಹ್ಯ ಕೃತಕ ಅಥವಾ ಪ್ರಕೃತಿಗೆ ಹೋಲುವ ಸುವಾಸನೆಗಳ ಬಳಕೆಯಿಂದಾಗಿ ಪರೀಕ್ಷಿಸಲಾದ ಉತ್ಪನ್ನಗಳು ಕೆಳಮಟ್ಟದ್ದಾಗಿವೆ" ಎಂದು ಸುರಕ್ಷತಾ ನಿಯಂತ್ರಕ ತೀರ್ಮಾನಿಸಿದೆ ಎಂದು ಅಧಿಖಾರಿಯೊಬ್ಬರು ತಿಳಿಸಿದರು.

 

ಭಾರತವು ವಿಶ್ವದ ಅತಿದೊಡ್ಡ ಆಲ್ಕೋಹಾಲ್ ಮಾರುಕಟ್ಟೆಗಳಲ್ಲಿ ಒಂದಾಗಿದ್ದು, ವಾರ್ಷಿಕ ಉದ್ಯಮದ ಆದಾಯ ಸುಮಾರು $40 ಶತಕೋಟಿ ಎಂದು ಅಂದಾಜಿಸಲಾಗಿದೆ. ಯುನೈಟೆಡ್ ಸ್ಪಿರಿಟ್ಸ್ ಮೂಲಕ ಡಯಾಜಿಯೊ ಇಂಡಿಯಾ, ಮಾರುಕಟ್ಟೆ ಪಾಲಿನ ದೃಷ್ಟಿಯಿಂದ ದೇಶದ ಅತಿದೊಡ್ಡ ಮದ್ಯ ಕಂಪನಿಯಾಗಿದ್ದು, ಜಾಗತಿಕ ಪ್ರತಿಸ್ಪರ್ಧಿ ಪೆರ್ನೋಡ್ ರಿಕಾರ್ಡ್‌ನೊಂದಿಗೆ ಸ್ಪರ್ಧಿಸುತ್ತಿದೆ. FSSAI ನಿಷೇಧಕ್ಕೆ ಒಳಗಾದ ಬ್ರ್ಯಾಂಡ್‌ಗಳು ಹೆಚ್ಚಾಗಿ ದೇಶೀಯವಾಗಿ ತಯಾರಿಸಿದ ಸ್ಪಿರಿಟ್‌ಗಳಾಗಿದ್ದು, ಆಮದು ಮಾಡಿಕೊಂಡ ವಿಸ್ಕಿ, ಸ್ಕಾಚ್ ಮತ್ತು ಪ್ರೀಮಿಯಂ ರಮ್‌ಗಿಂತ ಹೆಚ್ಚು ಕೈಗೆಟುಕುವ ಬೆಲೆಯಲ್ಲಿ ಮಾರಾಟವಾಗುತಿದ್ದು , ಅವುಗಳನ್ನು ದೇಶಾದ್ಯಂತ ವ್ಯಾಪಕವಾಗಿ ಸೇವಿಸಲಾಗುತ್ತದೆ.

 ಕಳೆದ ವಾರ ನಿಯಂತ್ರಕವು "ಶಕ್ತಿ ಪಾನೀಯಗಳು" ಎಂದು ಮಾರಾಟ ಮಾಡಲಾಗುವ ಪೆಪ್ಸಿಕೋ ಮತ್ತು ರೆಡ್‌ಬುಲ್‌ ನಲ್ಲಿ ಹೆಚ್ಚಿನ ಕೆಫೀನ್ ಹೊಂದಿರುವ ಪಾನೀಯಗಳ ತಯಾರಕರಿಗೆ ಆ ವಿವರಣೆಯನ್ನು ಲೇಬಲ್‌ ನಲ್ಲಿ ಬಳಸುವುದನ್ನು ನಿಲ್ಲಿಸುವಂತೆ ನಿರ್ದೇಶಿಸಿತು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0