ಫೀಲ್ಡ್ ಮಾರ್ಷಲ್ ‌ಕೆ.ಎಂ ಕಾರ್ಯಪ್ಪ ಕಾಲೇಜಿನಲ್ಲಿ ‌ಶಾರ್ಟ್ ರೇಂಜ್ ರೈಫಲ್ ಫೈರಿಂಗ್ ರೇಂಜ್ ಉದ್ಘಾಟನೆ

May 5, 2026 - 18:17
 0  273
ಫೀಲ್ಡ್ ಮಾರ್ಷಲ್ ‌ಕೆ.ಎಂ ಕಾರ್ಯಪ್ಪ ಕಾಲೇಜಿನಲ್ಲಿ ‌ಶಾರ್ಟ್ ರೇಂಜ್ ರೈಫಲ್ ಫೈರಿಂಗ್ ರೇಂಜ್ ಉದ್ಘಾಟನೆ

ಮಡಿಕೇರಿ;ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಹಳೇ ವಿದ್ಯಾರ್ಥಿ ಸಂಘದ ₹5.50 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಶಾರ್ಟ್ ರೇಂಜ್ ರೈಫಲ್ ಫೈರಿಂಗ್ ರೇಂಜ್ ಅನ್ನು 19ನೇ ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ ಕಮಾಂಡಿಂಗ್ ಆಫೀಸರ್ ಕರ್ನಲ್ ರೆಜಿತ್ ಮುಕುಂದನ್ ಮತ್ತು ಕೊಡಗು ವಿ.ವಿ ಉಪ ಕುಲಪತಿ ಪ್ರೊ.ಅಶೋಕ್ ಸಂಗಪ್ಪ ಉದ್ಘಾಟಿಸಿದರು.

"ಎನ್‌ಸಿಸಿ ಕೆಡೆಟ್‌ಗಳಿಗೆ ಫೈರಿಂಗ್ ರೇಂಜ್ ಇಲ್ಲದಾಗಿತ್ತು. ಈ ರೇಂಜ್ ಅಮೂಲ್ಯವಾಗಿದ್ದು, ಕೆಡೆಟ್‌ಗಳು ಸದುಪಯೋಗ ಪಡೆದುಕೊಳ್ಳಬೇಕು" ಎಂದು ಕರ್ನಲ್ ರೆಜಿತ್ ಹೇಳಿದರು. "ಗುಂಡು ಗುರಿ ತಲುಪುವಂತೆ ವಿದ್ಯಾರ್ಥಿಗಳು ಬದುಕಿನ ಗುರಿ ಹೊಂದಬೇಕು. ದೇಶ ಸೇವೆಗೆ ಮುಂದಾಗಿ" ಎಂದು ಪ್ರೊ.ಅಶೋಕ್ ಸಂಗಪ್ಪ ಕರೆ ನೀಡಿದರು.

ನಿವೃತ್ತ ಎಸ್.ಪಿ. ಮುಕ್ಕಾಟಿರ ಎ.ಅಪ್ಪಯ್ಯ, ಸಂಘದ ಅಧ್ಯಕ್ಷ ಬೊಳ್ಳಜ್ಜಿರ ಅಪ್ಪಯ್ಯ, ಪ್ರಾಂಶುಪಾಲ ಮೇಜರ್ ಪ್ರೊ. ಬಿ.ರಾಘವ ಮಾತನಾಡಿದರು. ವಕೀಲ ಮುಂಡಂಡ ಸುದೈಯ್ ನಾಣಯ್ಯ ರಾಜ್ಯ-ರಾಷ್ಟ್ರ ಮಟ್ಟದ ಶೂಟಿಂಗ್ ತರಬೇತಿಗೆ ಬಳಸಿಕೊಳ್ಳಲು ಸಲಹೆ ನೀಡಿದರು.ಗಣ್ಯರನ್ನು ಸನ್ಮಾನಿಸಲಾಯಿತು. ಹಳೇ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಉಪನ್ಯಾಸಕರು, ಎನ್‌ಸಿಸಿ ಕೆಡೆಟ್‌ಗಳು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0