ಮಗ್ಗುಲ ಶ್ರೀ ಶನೀಶ್ವರ ಮತ್ತು ನವಗ್ರಹ ದೇಗುಲದಲ್ಲಿ ಶ್ರಾವಣ ಮಾಸ ಆಚರಣೆ
ವಿರಾಜಪೇಟೆ :ಶ್ರಾವಣ ಮಾಸದಲ್ಲಿ ಶ್ರೀ ಶನೀಶ್ವರ ದೇವರ ದೇಗುಲಗಳಲ್ಲಿ ವಿಶೇಷ ಆರಾಧನೆಗಳು ನಡೆಯುವುದು ವಾಡಿಕೆಯಾಗಿದ್ದು. ಹಿನ್ನೆಲೆಯಲ್ಲಿ ಮಗ್ಗುಲ ಶ್ರೀ ಶನೀಶ್ವರ ದೇಗುಲದಲ್ಲಿ ತಾ 26-07-2025 ರಿಂದ ಶ್ರಾವಣ ಮಾಸದ ವಿಶೇಷ ಪೂಜೆಗಳು ನಡೆಯಲಿದೆ. ವಿರಾಜಪೇಟೆ ತಾಲ್ಲೂಕಿನ ಮಗ್ಗುಲ ಗ್ರಾಮದಲ್ಲಿ ನೆಲೆಗೊಂಡಿರುವ ಶ್ರೀ ಶನೀಶ್ವರ ಮತ್ತು ನವಗ್ರಹ ದೇವಾಲಯ ದಲ್ಲಿ ಶ್ರೀ ದೇವರಿಗೆ ಶ್ರಾವಣ ಮಾಸದ ವಿಶೇಷ ಪೂಜೆಗಳು ದಿನಾಂಕ 26-07-2025 ರಿಂದ ಆರಂಭವಾಗಿ 23-08-2025 ರಂದು ಕೊನೆಯಾಗಲಿದೆ. ತಾ 26 ರಂದು ಬೆಳಿಗ್ಗೆ 6-00 ಗಂಟೆಗೆ ಗಣಪತಿ ಹೋಮದೊಂದಿಗೆ ಶ್ರಾವಣ ಮಾಸದ ಉತ್ಸವ ಆರಂಭವಾಗಲಿದೆ. ಪ್ರಸ್ತುತ ವರ್ಷದಲ್ಲಿ ಒಟ್ಟು 05 ಶನಿವಾರ ಗಳು ಬಂದಿರುವುದು ವಿಶೇಷ.ತಾ. 26, ತಾ 02-08-2025, ತಾ.09, 16, ಮತ್ತು 23 ರ ಶನಿವಾರದ ದಿನಗಳಲ್ಲಿ ದೇಗುಲದಲ್ಲಿ ನವಗ್ರಹ ಪೂಜೆ,ಶನಿಶಾಂತಿ ಪೂಜೆ,ಶನಿಜಪ, ಮತ್ತು ಇತರ ವಿಶೇಷ ಪೂಜೆಗಳು ನಡೆಯಲಿದೆ. ಆಗಮಿಕ ಭಕ್ತಾಧಿಗಳಿಗೆ. ಶನಿವಾರ ದಿನದಂದು ಅನ್ನಸಂತರ್ಪಣೆ ಇರಲಿದೆ. ದೇಗುಲದಲ್ಲಿ ನಡೆಯುವ 05 ವಾರಗಳ ವಿಶೇಷ ಪೂಜಾಮಹೋತ್ಸವಕ್ಕೆ ನಾಡಿನ ಸಮಸ್ತ ಭಕ್ತಮಹಾಶಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಅನುಗ್ರಹ ಪಡೆದುಕೊಳ್ಳುವಂತೆ ದೇಗುಲದ ಆಡಳಿತ ಮಂಡಳಿಯು ಮನವಿ ಮಾಡಿದೆ. ಹೆಚ್ಚಿನ ವಿವರಗಳಿಗಾಗಿ 9901247888 ಮತ್ತು 9449504902 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸುವಂತೆ ಕೋರಿದ್ದಾರೆ.