ಸಿದ್ದಾಪುರ: ಸರ್ಕಾರಿ ಮಲಯಾಳಂ ಶಾಲೆಗೆ ಬೆಂಚ್ ವಿತರಣೆ

ಸಿದ್ದಾಪುರ: ಸರ್ಕಾರಿ ಮಲಯಾಳಂ ಶಾಲೆಗೆ ಬೆಂಚ್ ವಿತರಣೆ

ಸಿದ್ದಾಪುರ :ಸಿದ್ದಾಪುರದ ಸರ್ಕಾರಿ ಮಲಯಾಳಂ ಶಾಲೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನಾಲ್ಕು ಬೆಂಚುಗಳನ್ನ ಯುವಕರು ವಿತರಣೆ ಮಾಡಿದರು. ನೆಲ್ಲಿಹುದಿಕೇರಿಯ ಸಮಾಜ ಸೇವಕ ಕೆ.ಎಂ ಬಶೀರ್ ಅವರ ಸಹಕಾರದೊಂದಿಗೆ ನಾಲ್ಕು ಬೆಂಚುಗಳನ್ನ ಶಿಕ್ಷಕರುಗಳ ಸಮ್ಮುಖದಲ್ಲಿ ವಿತರಣೆ ಮಾಡಲಾಯಿತು. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮುಂದಾಗಿರುವ ಯುವಕರು ಸೇವಾ ಮನೊ ಭಾವದೊಂದಿಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಯುವಕರ ಬಗ್ಗೆ ಶಿಕ್ಷಕರುಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಸಮಾಜ ಸೇವಾ ಸಂಘಟನೆಯ ಪ್ರಮುಖರಾದ ಮಿಥುನ್, ಅರುಣ್, ಆಶಿಕ್, ಜಮಾಲ್, ಟೋನಿ, ಶಿವಶಂಕರ, ಜಾಗು, ಕುಶ, ದಿನೇಶ್, ಶಿವ, ಕಿರಣ್ ಸೇರಿದಂತೆ ಮತ್ತು ಇತರರು ಹಾಜರಿದ್ದರು.