Kodagu

ಸಿದ್ದಾಪುರ:ಸ್ಕೂಟಿಯಿಂದ ಬಿದ್ದು 16 ವರ್ಷದ ಯುವಕ ಸಾವು

admincoorgdaily

ಸಿದ್ದಾಪುರ:ಸ್ಕೂಟಿಯಿಂದ ಬಿದ್ದು 16 ವರ್ಷದ ಯುವಕ ಸಾವು

ಸಿದ್ದಾಪುರ: ಸಿದ್ದಾಪುರ ಸಮೀಪದ ಹೊಳಮಾಳದಲ್ಲಿ ಸ್ಕೂಟಿಯಿಂದ ಜಾರಿ ಬಿದ್ದು 16 ವರ್ಷದ ಯುವಕ ನಿಯಾಸ್ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ನಡೆದಿದೆ. ಸ್ಥಳೀಯರ ಪ್ರಕಾರ ಸ್ಕೂಟಿಯಲ್ಲಿ ತೆರಳುತ್ತಿದ್ದ ವೇಳೆ ನಿಯಾಸ್ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಿದ್ದಾನೆ. ತಲೆಗೆ ತೀವ್ರ ಪೆಟ್ಟಾಗಿದ್ದು, ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯುವಷ್ಟರಲ್ಲಿ ಆತ ಮೃತಪಟ್ಟಿದ್ದಾನೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸಿದ್ದಾಪುರ ಪೊಲೀಸ್ ಅಧಿಕಾರಿ ಮಂಜುನಾಥ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸಲಾಗುತ್ತಿದೆ. ಮೃತ ಯುವಕನ ಸಾವಿನ ಸುದ್ದಿ ಕೇಳಿ ಗ್ರಾಮದಲ್ಲಿ ಶೋಕಾಚರಣೆ ಮನೆ ಮಾಡಿದೆ.