ಸಿದ್ದಾಪುರ: ಹುಲಿ ದಾಳಿಗೆ ಹಸು ಬಲಿ

Nov 23, 2025 - 10:44
 0  666
ಸಿದ್ದಾಪುರ: ಹುಲಿ ದಾಳಿಗೆ ಹಸು ಬಲಿ

ಸಿದ್ದಾಪುರ: ಹುಲಿ ದಾಳಿ ನಡೆಸಿ ಬೀಡಾಡಿ ಹಸುವನ್ನು ಕೊಂದುಹಾಕಿರುವ ಘಟನೆ ಬಾಡಗ ಬಾಣಂಗಾಲ ಗ್ರಾಮದ ಮಠ ಸಮೀಪ ನಡೆದಿದೆ. ಬಾಡಗ ಬಾಣಂಗಾಲ ಗ್ರಾಮದ ಖಾಸಗಿ ಸಂಸ್ಥೆಗೆ ಸೇರಿದ ಕಾಫಿ ತೋಟದಲ್ಲಿ ಮೇಯುತ್ತಿದ್ದ ಬಿಡಾಡಿ ಹಸುವಿನ ಮೇಲೆ ಹುಲಿ ದಾಳಿ ನಡೆಸಿ ಕೊಂದುಹಾಕಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಈ ಭಾಗದ ಕಾಫಿ ತೋಟಗಳಲ್ಲಿ ಹಲವಾರು ಬೀಡಾಡಿ ಜಾನುವಾರುಗಳು ಸುತ್ತಾಡುತ್ತಿದ್ದು ಹುಲಿ ಈ ಹಿಂದೆ ಕೂಡ ಕಾಫಿ ತೋಟಗಳಲ್ಲಿ ಜಾನುವಾರುಗಳ ಮೇಲೆ ದಾಳಿ ಮಾಡಿದ ಘಟನೆಗಳು ನಡೆದಿತ್ತು.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0