ಸಿದ್ದಾಪುರ;ಗಾಂಜಾ ಸೇವಿಸಿ ಗಲಾಟೆ ಇಬ್ಬರ ವಿರುದ್ಧ ಎಫ್‌ಐಆರ್
ಸಿದ್ದಾಪುರ, ಫೆ. 23: ಗಾಂಜಾ ಸೇವನೆ ಮಾಡಿ ಗಲಾಟೆ ಮಾಡಿದ ಆರೋಪದಡಿ ಸಿದ್ದಾಪುರ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಿದ್ದಾಪುರದ ಮಾರುಕಟ್ಟೆ ಬಳಿ ಇಬ್ಬರು ಜೋರಾಗಿ ಗಲಾಟೆ ಮಾಡುತ್ತ ಕಿರುಚಾಡುತ್ತಿದ್ದ ಕುರಿತು ದೂರು ಬಂದ ಹಿನ್ನೆಲೆ ಸ್ಥಳಕ್ಕೆ ತೆರಳಿದ ಪೊಲೀಸರು ಸಿದ್ದಾಪುರದ ನಿವಾಸಿ ಅಲ್‌ಾಬ್‌ಖಾನ್ ಎ.ಎಂ. (34) ಹಾಗೂ ನೆಲ್ಲಿಹುದಿಕೇರಿಯ ನಿವಾಸಿ ಟಿಸನ್ ಜೋಸೆಫ್ (28) ಅವರುಗಳನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಈ ಹಿನ್ನೆಲೆ ಇಬ್ಬರ ಮೇಲೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
What's Your Reaction?
Like
3
Dislike
0
Love
0
Funny
4
Angry
0
Sad
1
Wow
0
