ಸಿದ್ದಾಪುರ;ಗುಡ್ ಫ್ರೈಡೆ ಆಚರಣೆ

Apr 3, 2026 - 19:43
 0  193
ಸಿದ್ದಾಪುರ;ಗುಡ್ ಫ್ರೈಡೆ  ಆಚರಣೆ

ಸಿದ್ದಾಪುರ:- ಪವಿತ್ರ ಗುಡ್ ಫ್ರೈಡೆ ಅಂಗವಾಗಿ ಸಿದ್ದಾಪುರದ ಸಂತ ಮೇರೀಸ್ ಆರ್ಥೋಡಾಕ್ಸ್ ಸಿರಿಯನ್ ಚರ್ಚ್‌ನಲ್ಲಿ ಭಕ್ತಿಪೂರ್ವಕವಾಗಿ ವಿಶೇಷ ಪ್ರಾರ್ಥನೆಗಳು ನೆರವೇರಿದವು. ಕ್ರೈಸ್ತ ಸಮುದಾಯದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯೇಸು ಕ್ರಿಸ್ತನ ಶಿಲುಬೆಗೆ ಹಾಕಲ್ಪಟ್ಟ ದಿನದ ಸ್ಮರಣಾರ್ಥ ಪ್ರಾರ್ಥನೆ ಸಲ್ಲಿಸಿದರು.

 ಚರ್ಚಿನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವ ಮತ್ತು ಶಾಂತಿಯ ವಾತಾವರಣವನ್ನು ಸೃಷ್ಟಿಸಿತು. ಚರ್ಚಿನ ಧರ್ಮಗುರು ಫಾದರ್ ಮಥಾಯಿ ಅವರ ನೇತೃತ್ವದಲ್ಲಿ ಪೂಜೆ ಹಾಗೂ ವಿಶೇಷ ಪ್ರಾರ್ಥನೆಗಳು ನೆರವೇರಿಸಲಾಯಿತು.

ಈ ವೇಳೆ ಯೇಸು ಕ್ರಿಸ್ತನು ಮಾನವಕುಲಕ್ಕಾಗಿ ಅನುಭವಿಸಿದ ತ್ಯಾಗ ಮತ್ತು ನೋವುಗಳನ್ನು ಸ್ಮರಿಸಲಾಯಿತು. ಪ್ರಾರ್ಥನೆಗಳಲ್ಲಿ ಭಾಗವಹಿಸಿದ ಭಕ್ತರು ಶ್ರದ್ಧಾಭಕ್ತಿಯಿಂದ ಭಾಗವಹಿಸಿ ಆತ್ಮೀಯ ತೃಪ್ತಿಯನ್ನು ಹೊಂದಿದರು. ಗುಡ್ ಫ್ರೈಡೆ ಅಂಗವಾಗಿ ದಿನಪೂರ್ತಿ ಚರ್ಚಿನಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯಿತು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0