Kodagu

ಸಿದ್ದಾಪುರ: ಅಪ್ರಾಪ್ತ ಬಾಲಕನಿಗೆ ಕಾರು ಕೊಟ್ಟ ಪೋಷಕರಿಗೆ 25 ಸಾವಿರ ದಂಡ

admincoorgdaily

ಸಿದ್ದಾಪುರ: ಅಪ್ರಾಪ್ತ ಬಾಲಕನಿಗೆ ಕಾರು ಕೊಟ್ಟ ಪೋಷಕರಿಗೆ 25 ಸಾವಿರ ದಂಡ

ಸಿದ್ದಾಪುರ: ಅಪ್ರಾಪ್ತ ವಯಸ್ಕ ಬಾಲಕನಿಗೆ ಕಾರು ಚಲಾಯಿಸಲು ಅವಕಾಶ ನೀಡಿದ ಆರೋಪದ ಮೇಲೆ ಪೋಷಕರ ವಿರುದ್ಧ ಪ್ರಕರಣ ದಾಖಲಿಸಿ, ಮಾನ್ಯ ವಿರಾಜಪೇಟೆ JMFC ನ್ಯಾಯಾಲಯವು 25,000 ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದೆ.

 ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕನೊಬ್ಬ ಕಾರು ಚಲಾಯಿಸಿ ಭಾನುವಾರ ಸಂತೆ ದಿನ,ಪೊಲೀಸರನ್ನು ಕಂಡು ಅಂಗಡಿಗೆ ಡಿಕ್ಕಿ ಪಡಿಸಿದ್ದನು.ಈ ಸಂಬಂಧ ಪೋಷಕರ ವಿರುದ್ಧ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ವಿರಾಜಪೇಟೆ JMFC ನ್ಯಾಯಾಲಯವು ಮೋಟಾರು ವಾಹನ ಕಾಯ್ದೆ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಪೋಷಕರಿಗೆ 25,000 ರೂ ದಂಡ ವಿಧಿಸಿದೆ. ಈ ಕುರಿತು ಮಾತನಾಡಿದ ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ ಮಂಜುನಾಥ್ "ಪಾಲಕರೇ, ನಿಮ್ಮ ಅಪ್ರಾಪ್ತ ಮಕ್ಕಳಿಗೆ ಯಾವುದೇ ಕಾರಣಕ್ಕೂ ವಾಹನ ಚಲಾಯಿಸಲು ನೀಡಬೇಡಿ. ಹಾಗೆ ನೀಡಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು" ಎಂದು ಎಚ್ಚರಿಸಿದ್ದಾರೆ.