ಸಿದ್ದಾಪುರ;ಅಂಗಡಿಯಿಂದ 50 ಸಾವಿರ ರೂ ಕಳ್ಳತನ

May 26, 2026 - 09:08
May 26, 2026 - 09:10
 0  937
ಸಿದ್ದಾಪುರ;ಅಂಗಡಿಯಿಂದ 50 ಸಾವಿರ ರೂ ಕಳ್ಳತನ

ಮಡಿಕೇರಿ, ಮೇ 25: ಅಂಗಡಿಯ ಗಲ್ಲಾಪೆಟ್ಟಿಗೆಯಿಂದ ಹಾಡಹಗಲೇ ಹಣ ಕಳ್ಳತನ ಮಾಡಿದ ಘಟನೆ ಸಿದ್ದಾಪುರದಲ್ಲಿ ನಡೆದಿದೆ.

 ಸಿದ್ದಾಪುರದ ಮಡಿಕೇರಿ ರಸ್ತೆಯಲ್ಲಿ ಇರುವ ಪ್ರೈವುಡ್ ಅಂಗಡಿಗೆ ಪೂರ್ವಾಹ್ನ 11 ಗಂಟೆಗೆ ಇಬ್ಬರು ಅಪರಿಚಿತರು ಆಗಮಿಸಿ ಅಂಗಡಿಯ ವ್ಯವಸ್ಥಾಪಕ ಅಜೀಜ್ ಅವರ ಬಳಿ ತಮಗೆ ಮರದ ಬೀಡಿಂಗ್ ಮತ್ತು ಪ್ರೈವುಡ್‌ಗಳು ಬೇಕೆಂದು ಹೇಳಿದ್ದು, ಅಜೀಜ್ ಅಂಗಡಿಯ ಒಳಗೆ ಬೀಡಿಂಗ್ ತೆಗೆಯಲು ಹೋದ ಸಂದರ್ಭ ಒಬ್ಬ ವ್ಯಕ್ತಿ ಅವರೊಂದಿಗೆ ತೆರಳಿದ್ದಾರೆ.

ಈ ಸಂದರ್ಭಹೊರಗೆ ನಿಂತಿದ್ದ ವ್ಯಕ್ತಿ ಗಲ್ಲಾಪೆಟ್ಟಿಗೆಯ ಕೀಯನ್ನು ತೆಗೆದು ಗಲ್ಲಾಪೆಟ್ಟಿಗೆಯಲ್ಲಿದ್ದ ರೂ 50 ಸಾವಿರ ಹಣವನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ ಎಂದು ಅಂಗಡಿಯ ವ್ಯವಸ್ಥಾಪಕ ಅಜೀಜ್ ಸಿದ್ದಾಪುರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0