ಸಿದ್ದಾಪುರ;ಟ್ರ್ಯಾಕ್ಟರ್ ಪಲ್ಟಿಯಾಗಿ ಚಾಲಕ ಸಾವು

Feb 19, 2026 - 13:32
Feb 19, 2026 - 20:33
 0  2.8k
ಸಿದ್ದಾಪುರ;ಟ್ರ್ಯಾಕ್ಟರ್ ಪಲ್ಟಿಯಾಗಿ ಚಾಲಕ ಸಾವು

ಸಿದ್ದಾಪುರ:- ವಾಹನ ಚಲಾಯಿಸುವ ಆಸೆಯಿಂದ ಟ್ರಾಕ್ಟರ್ ಚಲಾಯಿಸಿದ ಕಾರ್ಮಿಕ ನಿಯಂತ್ರಣ ತಪ್ಪಿ ಹಳ್ಳಕ್ಕೆ ಮಗುಚಿದ ಪರಿಣಾಮ ಸ್ಥಳದಲ್ಲೆ ಮೃತ ಪಟ್ಟ ಘಟನೆ ಹಿಲ್ ಕಿಲ್ ಎಸ್ವೇಟ್ನಲ್ಲಿ ಸಂಭವಿಸಿದೆ.

ಬಾಗಲಕೋಟೆಯ ನಿವಾಸಿ ಪ್ರವೀಣ್ (35) ಮೃತ ದುರ್ದೈವಿ.

ಎಸ್ಟೇಟ್ ನಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಮುಂಜಾನೆ ಸಾಮಗ್ರಿಗಳನ್ನು ಒದಗಿಸಲು ಚಾಲಕನು ಇಲ್ಲದ ಸಂದರ್ಭ ವಾಹನ ಚಲಾಯಿಸುವ ಆಸೆಯಿಂದ ಟ್ರಾಕ್ಟರ್ ಚಲಾಯಿಸಿದ್ದು ಈ ದುರ್ಘಟನೆಗೆ ಕಾರಣವಾಗಿದೆ.

ಘಟನಾ ಸ್ಥಳಕ್ಕೆ ಪೋಲೀಸ್ ಠಾಣಾಧಿಕಾರಿ ಮಂಜುನಾಥ್, ಹಾಗೂ ಸಿಬ್ಬಂದಿಗಳು ಭೇಟಿನೀಡಿ ಮಹಜರು ನಡೆಸಿ ಸಂಬಂಧಿಕರು ಬಂದ ನಂತರ ಮರಣೋತರ ಪರಿಕ್ಷೆ ನಡೆಯಲಿದ್ದು ಮೃತದೇಹವನ್ನು ಮಡಿಕೇರಿ ಜಿಲ್ಲಾಸ್ಪತ್ರೆ ಶವಗಾರದಲ್ಲಿ ಇರಿಸಲಾಗಿದೆ.

What's Your Reaction?

Like Like 2
Dislike Dislike 0
Love Love 2
Funny Funny 0
Angry Angry 0
Sad Sad 6
Wow Wow 0