ಸಿದ್ದಾಪುರ:ಯುವಕ ಆತ್ಮಹತ್ಯೆ
admincoorgdaily

ಸಿದ್ದಾಪುರ, ಜೂ. 26: ಸಮೀಪದ ತೋಬನಕೊಲ್ಲಿಯಲ್ಲಿ ಮಣಿಕಂಠ, (25 ವರ್ಷ), ಎಂಬ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದೆ. ಸ್ಥಳಕ್ಕೆ ಸಿದ್ದಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಪೊಲೀಸ್ ತನಿಖೆಯಿಂದಷ್ಟೇ ಕಾರಣ ಬಹಿರಂಗವಾಗಬೇಕಿದೆ.