ಸಿದ್ದಾಪುರ:ಮಹಿಳೆಯರಿಗೆ ಸ್ಫೂರ್ತಿಯಾದ ಆಟೋ ಚಾಲಕಿ
ಮಡಿಕೇರಿ: ಆಟೋ ಚಾಲಕಿಯಾಗಬೇಕೆನ್ನುವ ಹಂಬಲ ವ್ಯಕ್ತಪಡಿಸಿದ ಮಹಿಳೆಗೆ ಹಿರಿಯ ಆಟೋ ಚಾಲಕಿ ಸುಜಾತ ಎಂಬುವರು ಆಟೋ ಚಾಲನೆ ತರಬೇತಿ ನೀಡಿದರು. ಶ್ರದ್ಧೆಯಿಂದ ತರಬೇತಿ ಪಡೆದು ಸಾಲ ಮಾಡಿ ಆಟೋ ಖರೀದಿಸಿ ವೃತ್ತಿ ಆರಂಭಿಸಿಯೇ ಬಿಟ್ಟ ಕುಶಾಲನಗರ ತಾಲ್ಲೂಕಿನ ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬರಡಿ ಗ್ರಾಮದ ಶ್ರೀವಳ್ಳಿ.
ಕಳೆದ ಹಲವು ವರ್ಷಗಳಿಂದಲೂ ಸುಜಾತ ಅವರ ಆಟೋದಲ್ಲಿ ಬರಡಿ ಗ್ರಾಮದಿಂದ ಸಿದ್ದಾಪುರಕ್ಕೆ ಪ್ರಯಾಣಿಸುತ್ತಿದ್ದ ಕಾರ್ಮಿಕ ಮಹಿಳೆ ಶ್ರೀವಳ್ಳಿ. ಕೆಲವು ದಿನಗಳ ನಂತರ ಕಾಡು ಪ್ರಾಣಿಗಳಾವಳಿ ಹೆಚ್ಚಾಗಿರುವುದರಿಂದ ತೋಟ ಕೆಲಸ ನಿರ್ವಹಿಸಲು ಸಾಧ್ಯವಾಗದೆ ಮನೆಯಲ್ಲಿಯೇ ಉಳಿದುಕೊಂಡಿದ್ದರು. ಚಾಲಕಿ ಸುಜಾತಾ ಶ್ರೀವಳ್ಳಿ ಅವರಿಗೆ ಧೈರ್ಯ ತುಂಬಿ ಆಟೋ ಚಾಲನೆ ತರಬೇತಿ ನೀಡಿದರು. ಆರಂಭದಲ್ಲಿ ಸ್ವಲ್ಪ ತೊಡಕು, ಅನುಭವಿಸಿದರು ಕೂಡ ಸ್ಥಳೀಯ ಆಟೋ ಚಾಲಕರು ಸೇರಿದಂತೆ ಮನೆಮಂದಿಯ ಪ್ರೋತ್ಸಾಹದಿಂದ ಯಶಸ್ಸು ಕಂಡು ಕೊಂಡು ಬರಡಿ ಗ್ರಾಮದ ಮಹಿಳಾ ಆಟೋ ಚಾಲಕಿಯೆನಿಸಿಕೊಂಡರು.
ಕಳೆದ ಒಂದು ತಿಂಗಳಿಂದ ಈ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದು ಬೆಳಿಗ್ಗೆನಿಂದ ಸಂಜೆ 6 ಗಂಟೆ ತನಕ ಸೇವೆ ನೀಡುವ ಮಹಿಳೆಯ ಸಾಧನೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು. ಆಟೋ ಬಾಡಿಗೆಯಿಂದ ಕುಟುಂಬ ಜೀವನ ನಡೆಸುವಂತಾಗಿದ್ದು ಗ್ರಾಮದವರು ಸಹಕಾರ ನೀಡಿದ್ದಾರೆ.
ಎಂದರು. ಹಿರಿಯ ಆಟೋ ಚಾಲಕಿ ಸುಜಾತ ಮಾತನಾಡಿ, ನಾನು ಹತ್ತು ವರ್ಷದಿಂದ ಸಿದ್ದಾಪುರ ನೆಲ್ಯಹುದಿಕೇರಿ ಗ್ರಾಮದಲ್ಲಿ ಆಟೋ ಚಾಲನೆ ಮಾಡುತ್ತೇನೆ ನನ್ನ ಗೆಳತಿ ಶೀವಳ್ಳಿ ಅವರಿಗೆ ತರಬೇತಿ ನೀಡಿ ಆಟೋ ಚಾಲಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ ಮಹಿಳೆಯರು ಮನಸ್ಸು ಮಾಡಿದರೆ ಎಲ್ಲಾ ರೀತಿಯಲ್ಲಿ ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಧ್ಯವಾಗಲಿದೆ ಎಂದರು.