ಸಿದ್ದಾಪುರ ಶ್ರೀ ಮುತ್ತಪ್ಪ ಶ್ರೀ ಭಗವತಿ ದೇವಾಲಯ ವಾರ್ಷಿಕೋತ್ಸವ

Feb 19, 2026 - 12:04
 0  200
ಸಿದ್ದಾಪುರ ಶ್ರೀ ಮುತ್ತಪ್ಪ ಶ್ರೀ ಭಗವತಿ ದೇವಾಲಯ ವಾರ್ಷಿಕೋತ್ಸವ

ಸಿದ್ದಾಪುರ, : ಸಿದ್ದಾಪುರದ ಶ್ರೀ ಮುತ್ತಪ್ಪ ಶ್ರೀ ಭಗವತಿ ದೇವಾಲಯದ 25ನೇ ವರ್ಷದ ವಾರ್ಷಿಕ ಮಹೋತ್ಸವವು ವಿವಿಧ ಪೂಜಾ ಕಾರ್ಯಕ್ರಮಗಳು ಹಾಗೂ ತೆರೆ ಮಹೋತ್ಸವ ಕಾರ್ಯಕ್ರಮಗಳು ತಾ.೧೮ ರಿಂದ ೨೨ ರವರೆಗೆ ನಡೆಯಲಿದೆ ಎಂದು ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.

ತಾ.೧೮ ರಂದು ಬೆಳಿಗ್ಗೆ ೬ ಗಂಟೆಗೆ ಪಂಚಗವ್ಯ, ಪುಣ್ಯಾಹ, ೬:೩೦ಕ್ಕೆ ಗಣಪತಿ ಹೋಮ, ೧೦ ಗಂಟೆಗೆ ಧ್ವಜಾರೋಹಣ, ೧೦.೩೦ ರಿಂದ ೧೧:೩೦ ರವರೆಗೆ ನವಕಲಶ ಅಭಿಷೇಕ, ಮಧ್ಯಾಹ್ನ ೧ ಗಂಟೆಗೆ ಮಹಾಪೂಜೆ, ತೀರ್ಥ ಪ್ರಸಾದ, ಅನ್ನಸಂತರ್ಪಣೆ ನಡೆಯಲಿದೆ. ತಾ.೧೯ ರಂದು ಬೆಳಿಗ್ಗೆ ೬ ಗಂಟೆಗೆ ಗಣಪತಿ ಹೋಮ, ೮:೩೦ ರಿಂದ ಚಂಡಿಕಾ ಹೋಮ, ಮಧ್ಯಾಹ್ನ ೨:೩೦ ಗಂಟೆಗೆ ಮಹಾಪೂಜೆ, ತೀರ್ಥ ಪ್ರಸಾದ, ಅನ್ನಸಂತರ್ಪಣೆ ನಡೆಯಲಿದೆ.

ಸಂಜೆ ೬:೩೦ ಗಂಟೆಗೆ ದೇವರ ಬಲಿ, ಮಹಾಪೂಜೆ, ತೀರ್ಥ ಪ್ರಸಾದ, ಅನ್ನಸಂತರ್ಪಣೆ ನಡೆಯಲಿದೆ. ತಾ.೨೦ ರಂದು ಬೆಳಿಗ್ಗೆ ೬ ಗಂಟೆಗೆ ಗಣಪತಿ ಹೋಮ, ಬೆಳಿಗ್ಗೆ ೮ ರಿಂದ ೧೨ ಗಂಟೆಯವರೆಗೆ ದುರ್ಗಾ ಪೂಜೆ, ಆಶ್ಲೇಷ ಬಲಿ, ನಾಗಹೋಮ, ಮಹಾಪೂಜೆ, ತೀರ್ಥಪ್ರಸಾದ, ಅನ್ನಸಂತರ್ಪಣೆ ನಡೆಯಲಿದೆ.

 ಸಂಜೆ ೫ಕ್ಕೆ ಕಾವೇರಿ ನದಿಗೆ ತಾಲಪೋಲಿ ಹೊತ್ತ ಬಾಲಕಿಯರು, ಭಕ್ತಾದಿಗಳು ವಾದ್ಯ ಮೇಳದೊಂದಿಗೆ ಸಿದ್ಧಾಪುರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ದೇವಿಯು ಸ್ನಾನಕ್ಕೆ ತೆರಳುವುದು. ರಾತ್ರಿ ೮ ಗಂಟೆಗೆ ದೇವಾಲಯದಲ್ಲಿ ದೇವಿಯ ನರ್ತನ, ರಾತ್ರಿ ೯:೩೦ ಗಂಟೆಗೆ ಮಹಾಪೂಜೆ, ತೀರ್ಥ ಪ್ರಸಾದ ನಂತರ ಅನ್ನಸಂತರ್ಪಣೆ ನಡೆಯಲಿದೆ. ತಾ.೨೧ ರಂದು ಬೆಳಿಗ್ಗೆ ೬ಕ್ಕೆ ಗಣಪತಿ ಹೋಮ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ೫ ಗಂಟೆಗೆ ಶ್ರೀ ಮುತ್ತಪ್ಪ ಮಲೆ ಇಳಿಸುವುದು.

 ರಾತ್ರಿ ೭ಕ್ಕೆ ಶ್ರೀ ಮುತ್ತಪ್ಪನ ವೆಳ್ಳಾಟಂ, ೭:೩೦ಕ್ಕೆ ಶಾಸ್ತಪ್ಪನ ವೆಳ್ಳಾಟಂ, ೮ಕ್ಕೆ ಗುಳಿಗನ ವೆಳ್ಳಾಟಂ, ರಾತ್ರಿ ೮:೩೦ಕ್ಕೆ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ರಾತ್ರಿ ೯ಕ್ಕೆ ವಸೂರಿ ಮಾಲಾ ದೇವಿಯು ಕಾವೇರಿ ನದಿಗೆ ಸ್ನಾನಕ್ಕೆ ಹೊರಡುವುದು. ರಾತ್ರಿ ೧೦ ಗಂಟೆಗೆ ಶ್ರೀ ವಿಷ್ಣುಮೂರ್ತಿ ವೆಳ್ಳಾಟಂ ನಡೆಯಲಿದೆ.

ತಾ.೨೨ರಂದು ಪ್ರಾತಃಕಾಲ ೫ ಗಂಟೆಗೆ ಗುಳಿಗನತೆರೆ, ಬೆಳಿಗ್ಗೆ ೬:೩೦ಕ್ಕೆ ಶಾಸ್ತಪ್ಪನ ತೆರೆ, ಬೆಳ್ಳಿಗೆ ೭:೩೦ಕ್ಕೆ ತಿರಪ್ಪನ ಮುತ್ತಪ್ಪನ ತೆರೆ, ಬೆಳಿಗ್ಗೆ ೮ಕ್ಕೆ ಭಗವತಿಯ ತೆರೆ, ಪೂರ್ವಾಹ್ನ ೧೧ ಗಂಟೆಗೆ ವಿಷ್ಣುಮೂರ್ತಿ ತೆರೆ ನಡೆಯಲಿದೆ. ಮಧ್ಯಾಹ್ನ ೧ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0