ಸಿ.ಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡುವೆ ಸಾಧ್ಯತೆ; ಶುಕ್ರವಾರ ಸಿ.ಎಂ ಸ್ಥಾನಕ್ಕೆ ರಾಜೀನಾಮೆ!

ಸಿ.ಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡುವೆ ಸಾಧ್ಯತೆ;  ಶುಕ್ರವಾರ ಸಿ.ಎಂ ಸ್ಥಾನಕ್ಕೆ ರಾಜೀನಾಮೆ!

ನವದೆಹಲಿ/ಬೆಂಗಳೂರು, (ಮೇ 26): ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಸಸ್ಪೆನ್ಸ್ ಈಗ ರೋಚಕ ತಿರುವು ಪಡೆದುಕೊಂಡಿದೆ.

 ದೆಹಲಿಯಲ್ಲಿ ನಡೆದ ಸುಮಾರು 6 ಗಂಟೆಗಳ ಸುದೀರ್ಘ ಮ್ಯಾರಾಥಾನ್ ಸಭೆಯಲ್ಲಿ ನಾಯಕತ್ವ ಬದಲಾವಣೆ (karnataka power tussle) ಬಗ್ಗೆ ಚರ್ಚೆಯಾಗಿದ್ದು, ಈ ವೇಳೆ ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯ (CM Siddaramaiah) ರಾಜ್ಯಸಭೆ ಆಫರ್ ನೀಡುವ ಮೂಲಕ ರಾಷ್ಟ್ರ ರಾಜಕಾರಣಕ್ಕೆ ಬರುವಂತೆ ಆಫರ್ ನೀಡಿದ್ದಾರೆ.

ಇದಕ್ಕೆ ಯಾವುದೇ ಸಮ್ಮತಿ ಸೂಚಿಸದ ಸಿದ್ದರಾಮಯ್ಯ, ಸಭೆ ಬಳಿಕ ನೇರವಾಗಿ ಜಾರ್ಜ್​​​ ನಿವಾಸದಲ್ಲಿದ್ದ ಆಪ್ತ ಸಚಿವರು, ಶಾಸಕರೊಂದಿಗೆ ರಹಸ್ಯ ಸಭೆ ನಡೆಸಿ ಚರ್ಚಿಸಿದ್ದು, ಈ ವೇಳೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

 ಇನ್ನೊಂದೆಡೆ ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಬೇಡಿ ಎಂದು ಆಪ್ತರು ಸಿದ್ದರಾಮಯ್ಯಗೆ ಸಲಹೆ ನೀಡಿದ್ದು, ನಿಮ್ಮ ಪರವಾಗಿ ನಾವೇ ರಾಹುಲ್​ ಗಾಂಧಿ ಬಳಿ ಮಾತನಾಡುತ್ತೇವೆ ಎಂದಿದ್ದಾರೆ. ಆದ್ರೆ, ಇದಕ್ಕೆ ಸಿದ್ದರಾಮಯ್ಯ, ಇಲ್ಲ, ನಾನು ರಾಹುಲ್​ ಗಾಂಧಿಯವರನ್ನ ನಿರಾಕರಿಸಲು ಸಾಧ್ಯವಿಲ್ಲ. ನಾನು ರಾಜೀನಾಮೆ ಕೊಡುತ್ತೇನೆ, ನೀವು ಬೇಕಾದ್ರೆ ಹೋಗಿ ಮಾತಾಡಿ ಎಂದಿದ್ದಾರೆ ಎಂದು ತಿಳಿದುಬಂದಿದೆ.ಮೂಲಗಳ ಪ್ರಕಾರ ಸಿದ್ದರಾಮಯ್ಯ ಅವರು ಗುರುವಾರ ಅಥವಾ ಶುಕ್ರವಾರ ರಾಜೀನಾಮೆ ನೀಡುವ ಸಾಧ್ಯತೆ ಇದೆ.