State News

ಸ್ನಾನಕ್ಕೆ ತೆರಳಿದ ಸಹೋದರಿಯರು ಅನುಮಾನಸ್ಪದ ಸಾವು!

admincoorgdaily

ಕುಶಾಲನಗರ:ಸ್ನಾನ ಮಾಡಲು ತೆರಳಿದ ಯುವತಿಯರಿಬ್ಬರು ಅನುಮಾನಸ್ಪಾದವಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ ಬೆಟ್ಟದಪುರದಲ್ಲಿ ಸಂಭವಿಸಿದೆ.ಬೆಟ್ಟದಪುರ ಗ್ರಾಮದ ನಿವಾಸಿಗಳಾದ ಗುಲ್ಬಾರ್ಮ್ (23) ಸಿಮ್ರಾನ್ ತಾಜ್ (20) ಮೃತ ದುರ್ದೈವಿಗಳು.ಗುಲ್ಫಾರ್ಮ್, ಸಿಮ್ರಾನ್ ತಾಜ್ ಇಬ್ಬರೂ ಒಟ್ಟಿಗೆ ಸ್ನಾನ ಮಾಡಲು ಹೋಗಿದ್ದಾಗ ಘಟನೆ ನಡೆದಿದೆ.

 ಸ್ನಾನಕ್ಕೆ ಹೋದವರು ಬಹಳ ಸಮಯವಾದರೂ ಹೊರಗೆ ಬಾರದೆ, ಅನುಮಾನಗೊಂಡ ತಂದೆ ಅಲ್ತಾಫ್ ಬಾಗಿಲು ಬಡಿದಿದ್ದಾರೆ. ಆಗಲೂ ಬಾಗಿಲು ತೆಗೆದಿಲ್ಲ ತೆರೆದು ನೋಡಿದಾಗ ಮಕ್ಕಳಿಬ್ಬರು ಅರೆಪ್ರಜ್ಞಾವಸ್ಥೆಯಲ್ಲಿರುವುದು ಗೊತ್ತಾಗಿದೆ ತಕ್ಷಣ ಇಬ್ಬರನ್ನೂ ಸಾರ್ವಜನಿಕ ಆಸ್ಪತ್ರೆಗೆ ಅಷ್ಟರಲ್ಲಿ ಇಬ್ಬರೂ ಮೃತಪಟ್ಟಿದ್ದಾರೆ. ಗ್ಯಾಸ್ ಗೀಸರ್ ಸೋರಿಕೆಯಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.