ಸ್ಮೃತಿ ಮಂಧಾನ–ಪಲಾಶ್ ಮುಚ್ಚಲ್ ಮದುವೆ ಮುಂದೂಡಿಕೆ: ಇನ್‌ಸ್ಟಾಗ್ರಾಂ ನಲ್ಲಿ ಇಬ್ಬರ ಬಯೋದಲ್ಲಿ ಕುತೂಹಲ ಮೂಡಿಸಿದ 'ದುಷ್ಟ ಕಣ್ಣು' ಎಮೋಜಿ!

Nov 29, 2025 - 19:45
 0  753
ಸ್ಮೃತಿ ಮಂಧಾನ–ಪಲಾಶ್ ಮುಚ್ಚಲ್ ಮದುವೆ ಮುಂದೂಡಿಕೆ:  ಇನ್‌ಸ್ಟಾಗ್ರಾಂ ನಲ್ಲಿ ಇಬ್ಬರ ಬಯೋದಲ್ಲಿ ಕುತೂಹಲ ಮೂಡಿಸಿದ 'ದುಷ್ಟ ಕಣ್ಣು' ಎಮೋಜಿ!
Photo credit: INDIA TODAY

ಮುಂಬೈ: ಕ್ರಿಕೆಟರ್ ಸ್ಮೃತಿ ಮಂಧಾನ ಮತ್ತು ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಅವರ ಮುಂದೂಡಲಾದ ಮದುವೆಯ ಸುತ್ತಲಿನ ಅನುಮಾನಗಳು ಇನ್ನೂ ದೂರವಾಗದಿರುವ ನಡುವೆಯೇ, ಜೋಡಿ ತಮ್ಮ ಇನ್‌ಸ್ಟಾಗ್ರಾಂ ಬಯೋದಲ್ಲಿ 'ದುಷ್ಟ ಕಣ್ಣು' ಎಮೋಜಿ ಸೇರಿಸಿರುವುದು ಕುತೂಹಲಕ್ಕೆ ಮತ್ತೊಂದು ಕಾರಣವಾಗಿದೆ.

ಕಳೆದ ಕೆಲವು ದಿನಗಳಿಂದ ಅವರ ವೈಯಕ್ತಿಕ ಬದುಕಿನ ಬಗ್ಗೆ ಹರಿದಾಡುತ್ತಿದ್ದ ವದಂತಿಗಳನ್ನು ತಣ್ಣಗಾಗಿಸಲು ಮಾಡಿದ ಹೆಜ್ಜೆಯೆಂದು ಅಭಿಮಾನಿಗಳು ವ್ಯಾಖ್ಯಾನಿಸುತ್ತಿದ್ದಾರೆ.

ನವೆಂಬರ್‌ 23ರಂದು ನಡೆಯಬೇಕಿದ್ದ ಮದುವೆ ಕೊನೆಯ ಕ್ಷಣದಲ್ಲಿ ಮುಂದೂಡಿಕೆಯಾಗಿತ್ತು.ಸ್ಮೃತಿಯವರ ತಂದೆಗೆ ಮದುವೆಗೆ ಕೆಲವೇ ಗಂಟೆಗಳ ಮೊದಲು ಹೃದಯಾಘಾತ ಸಂಭವಿಸಿತ್ತು ಇಂದು ಕುಟುಂಬ ವರ್ಗವು ಮಾಹಿತಿ ನೀಡಿತ್ತು. ಈ ನಡುವೆ, ಎರಡೂ ಕುಟುಂಬಗಳು ಸಿದ್ಧತೆಗಳನ್ನು ತಕ್ಷಣವೇ ನಿಲ್ಲಿಸಿತು.

“ಸ್ಮೃತಿ ಮತ್ತು ಪಲಾಶ್ ಇಬ್ಬರೂ ಮಾನಸಿಕ ಒತ್ತಡದಲ್ಲಿದ್ದಾರೆ. ಆಕಸ್ಮಿಕ ಆರೋಗ್ಯ ಸಮಸ್ಯೆಯು ಕುಟುಂಬಗಳಿಗೆ ಆಘಾತ ತಂದಿದೆ,” ಎಂದು ಪಲಾಶ್ ಮುಚ್ಚಲ್ ಅವರ ತಾಯಿ ಅಮಿತಾ ಮುಚ್ಚಲ್ ಹೇಳಿದ್ದರು.

“ಪಲಾಶ್ ತಮ್ಮ ವಧುವಿನೊಂದಿಗೆ ಮನೆಗೆ ಬರುವ ಕನಸು ಕಂಡಿದ್ದರು. ಸ್ವಾಗತಕ್ಕೂ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಎಲ್ಲವೂ ಶೀಘ್ರದಲ್ಲೇ ಸರಿಯಾಗಲಿದೆ. ಮದುವೆ ಬೇಗನೆ ನಡೆಯಲಿದೆ,” ಎಂದು ಅವರು Hindustan Times ಗೆ ಪ್ರತಿಕ್ರಿಯೆ ನೀಡಿದ್ದರು.

What's Your Reaction?

Like Like 1
Dislike Dislike 0
Love Love 2
Funny Funny 0
Angry Angry 0
Sad Sad 0
Wow Wow 1