ಕುಶಾಲನಗರದಲ್ಲೊಬ್ಬರು ಬೀದಿ ನಾಯಿಗಳ ಪಾಲಿನ ಅನ್ನಪೂರ್ಣೆ !

Jul 12, 2026 - 11:32
 0  785
ಕುಶಾಲನಗರದಲ್ಲೊಬ್ಬರು ಬೀದಿ ನಾಯಿಗಳ ಪಾಲಿನ ಅನ್ನಪೂರ್ಣೆ !

ಕುಶಾಲನಗರ, ಜು.12: ಬೀದಿ ನಾಯಿಗಳನ್ನು ಕಂಡೊಡನೆ ಥೂ ಎನ್ನುವ, ಕಲ್ಲೆಸೆಯುವ ಜನರೇ ಹೇರಳ. ಆ ನಾಯಿಗಳನ್ನು ಕಂಡು ಒಳಗೊಳಗೇ ಮರುಕ ಪಡುವ ಜನರು ವಿರಳ. ಕುಶಾಲನಗರದಲ್ಲಿ ಹಲವು ಸಮಯದಿಂದ ಕಂಡು ಬರುತ್ತಿರುವ ಚಿತ್ರಣ ಮೇಲಿನ ಎರಡನ್ನು ಮೀರಿಸುವಂತಹದ್ದು.

ಓರ್ವ ಬುರ್ಖಾದಾರಿ ವೃದ್ಧೆ ಕೈಯೊಂದರಲ್ಲಿ ಕೋಲು ಮತ್ತೊಂದರಲ್ಲಿ ಬ್ಯಾಗು ಹಿಡಿದುಕೊಂಡು ನಗರದ ರಸ್ತೆಗಳಲ್ಲಿ ಸಂಚರಿಸುತ್ತಾ ಹಸಿವಿನಿಂದ ಅವರನ್ನು ನೋಡುವ ಬೀದಿ ನಾಯಿಗಳಿಗೆ ತಮ್ಮ ಬ್ಯಾಗಿಂದ ಒಂದಿಷ್ಟು ಆಹಾರವನ್ನು ನೀಡುವ ಚಿತ್ರಣ ಸಾಮಾನ್ಯವಾಗಿ ಬಿಟ್ಟಿದೆ.

ತನ್ನ ಹೆಸರು 'ಬೀಬಿ' ಎಂದು ತಿಳಿಸಿರುವ ಅವರು ತಾನು ವಿರಾಜಪೇಟೆಯ ಕೆದಮುಳ್ಳೂರಿನವಳಾಗಿದ್ದು ಇರುವ ಇಬ್ಬರು ಪುತ್ರಿಯರಿಂದ ದೂರವಾಗಿ ಈಗ ಒಬ್ಬಂಟಿಯಾಗಿ ಕುಶಲನಗರದ ಕೆಲವು ಅಂಗಡಿ ಮುಂಗಟ್ಟುಗಳ ಹೊರಗೆ ರಾತ್ರಿ ವಾಸ್ತವ್ಯ ಹೂಡಿಕೊಂಡಿರುವುದಾಗಿ ತಿಳಿಸಿದರು.

" ತನಗೆ ಯಾರೂ ಹಣ ನೀಡುವ ಅಗತ್ಯವಿಲ್ಲ ಆದರೆ ದಯಮಾಡಿ ಯಾರಾದರೂ ಕೆಲವು ತಿಂಗಳುಗಳಿಂದ ಬಾರದಿರುವ ನನ್ನ ಪಿಂಚಣಿ ಭತ್ಯೆ ರೂ.2000 ಅನ್ನು ದೊರಕಿಸಿಕೊಡಿ ಅದಕ್ಕೆ ಬೇಕಾದ ಎಲ್ಲಾ ದಾಖಲೆಗಳು ನನ್ನ ಬಳಿ ಇದೆ " ಎಂದು ದುಃಖದಿಂದ ಮಾಧ್ಯಮದೊಂದಿಗೆ ವಿನಂತಿಸಿಕೊಂಡಿದ್ದಾರೆ. ಅಷ್ಟರಾಗಲ್ಲಾಗಲೇ ವೃದ್ಧೆಯ ಕಣ್ಣಾಲಿಗಳಲ್ಲಿ ನೀರು ತುಂಬಿದ್ದವು.

 ವರದಿ: ಶ್ರೀಧರ್ ನಾರಾಯಣ್

What's Your Reaction?

Like Like 2
Dislike Dislike 0
Love Love 3
Funny Funny 0
Angry Angry 0
Sad Sad 1
Wow Wow 1