ಸೋಮವಾರಪೇಟೆ: ಹೊರ ರಾಜ್ಯದ ಲಾಟರಿ ಮಾರಾಟ ದಂಧೆ, ಮೂವರ ಬಂಧನ

ಸೋಮವಾರಪೇಟೆ: ಹೊರ ರಾಜ್ಯದ ಲಾಟರಿ ಮಾರಾಟ ದಂಧೆ, ಮೂವರ ಬಂಧನ

ಸೋಮವಾರಪೇಟೆ:- ಪಟ್ಟಣದಲ್ಲಿ ಲಾಟರಿ ಮಾರಾಟಮಾಡುತಿದ್ದ ಮೂವರನ್ನು ಬಂಧಿಸಿರುವ ಪೊಲೀಸರು ಮೊಬೈಲ್ ಹಾಗೂ ನಗದು ವಶಪಡಿಸಿಕೊಂಡಿದ್ದಾರೆ. ಹಲವು ಸಮಯಗಳಿಂದ ಪಟ್ಟಣದಲ್ಲಿ ಹೊರರಾಜ್ಯದ ಲಾಟರಿ ಮಾರಾಟ ದಂಧೆ ನಿರಾತಂಕವಾಗಿ ನಡೆಯುತ್ತಿದ್ದು ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ದೊರೆತ ಖಚಿತ ಮಾಹಿತಿಯ ಮೇರೆಗೆ ವೃತ್ತ ನಿರೀಕ್ಷಕ ಮುದ್ದು ಮಾದೇವ ನೇತೃತ್ವದಲ್ಲಿ ಕ್ಲಬ್ ರಸ್ತೆಯ ಅಂಗಡಿ,ಖಾಸಗಿ ಬಸ್ಸುನಿಲ್ದಾಣದ ಕ್ಯಾಂಟೀನ್ ಹಾಗೂ ಮಡಿಕೇರಿ ರಸ್ತೆಯಲ್ಲಿ ಮೊಬೈಲ್ ಮೂಲಕ ಲಾಟರಿ ಮಾರಾಟ ಮಾಡುತಿದ್ದ ಶ್ರೀಕರ್ ,ಶಿವಕುಮಾರ್ಮತ್ತು ಸುಜಿತ್ ಎಂಬುವರನ್ನು ವಶಕ್ಕೆ ಪಡೆದು ಮೊಬೈಲ್ ಹಾಗೂ ಒಟ್ಟು 17,200 ಹಣವನ್ನು ವಶಪಡಿಸಿಕೊಂಡು ಮೊಖದಮ್ಮೆ ದಾಖಲಿಸಿರುವುದಾಗಿ ವೃತ್ತ ನಿರೀಕ್ಷಕ ಮುದ್ದುಮಾದೇವ ತಿಳಿಸಿದ್ದಾರೆ.