ಸೋಮವಾರಪೇಟೆ:ಪಟ್ಟಣ ಪಂಚಾಯಿತಿ ಮಾರುಕಟ್ಟೆ ಹರಾಜಿನಲ್ಲಿ 4.69ಲಕ್ಷ ಹೆಚ್ಚಿನ ಆದಾಯ

Mar 21, 2026 - 11:18
 0  110
ಸೋಮವಾರಪೇಟೆ:ಪಟ್ಟಣ ಪಂಚಾಯಿತಿ ಮಾರುಕಟ್ಟೆ ಹರಾಜಿನಲ್ಲಿ 4.69ಲಕ್ಷ ಹೆಚ್ಚಿನ ಆದಾಯ

ಸೋಮವಾರಪೇಟೆ:- ಇಲ್ಲಿನ ಪಟ್ಟಣ ಪಂಚಾಯಿತಿ ಮಾರುಕಟ್ಟೆ ಹರಾಜಿನಲ್ಲಿ 4.69ಲಕ್ಷ ಹೆಚ್ಚಿನ ಆದಾಯಗಳಿಸಲಾಗಿದೆ. ಪಂಚಾಯಿತಿಯ ವಿವಿಧ ಮಾರುಕಟ್ಟೆಗಳ 2026/27ನೆ ಸಾಲಿನ ಹರಾಜು ಪ್ರಕ್ರಿಯೆ ಪಂಚಾಯಿತಿ ಸಭಾಂಗಣದಲ್ಲಿ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ರವರ ಅಧ್ಯಕ್ಷತೆಯಲ್ಲಿ ನಡೆಯಿತು.

 ಹರಾಜು ಸಂದರ್ಭ ಕುರಿ,ಕೋಳಿ,ಮೀನು ಮಾರುಕಟ್ಟೆಯ ಕಟ್ಟಡ ಅವ್ಯವಸ್ಥೆ,ಮೂಲಭೂತ ಸೌಕರ್ಯ ಮುಂತಾದ ಸಮಸ್ಯೆಗಳ ಬಗ್ಗೆ ವರ್ತಕರು ಮುಖ್ಯಾಧಿಕಾರಿಗಳ ಗಮನಸೆಳೆದರು.ಇದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ನಿಮ್ಮೆಲ್ಲಾ ಸಮಸ್ಯೆಗಳನ್ನು ಆಲಿಸಿದ್ದೇನೆ,ಟೆಂಡರ್ ನಲ್ಲಿ ಹೆಚ್ಚಿನ ಲಾಭ ನಿರೀಕ್ಷಿದ್ದೇವೆ ನೀವು ಹೆಚ್ಚಿಗೆ ಹಣಕ್ಕೆ ಟೆಂಡರ್ ಕೂಗಿ ಮುಂದಿನ ದಿನಗಳಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡುತ್ತೇವೆ ಎಂದು ಮನವೊಲಿಸುವ ಮೂಲಕ ಪಂಚಾಯಿತಿಗೆ ಈ ಭಾರಿ ಕಳೆದ ವರ್ಷಕ್ಕಿಂತ 4.69ಲಕ್ಷ ಹೆಚ್ಚಿನ ಆದಾಯ ಗಳಿಸುವಲ್ಲಿ ಯಶಸ್ವಿಯಾದರು.

 ಈ ಭಾರಿ 3ಕೋಳಿಮಾಂಸ,ಒಂದು ಕುರಿಮಾಂಸ, 3 ಹಸಿ ಮೀನುಅಂಗಡಿಗಳು ಹಾಗೂ ಸಂತೆ ಸುಂಕ ಹರಾಜು ನಡೆದಿದ್ದು ಕೆಲವು ಅಂಗಡಿಗಳ ಮರುಹರಾಜು ನಡೆಯಲಿದೆ.. 9ಸಂಖ್ಯೆಯ ಹಸಿಮೀನು ಅಂಗಡಿ ಕಳೆದ ಬಾರಿ1.15ಲಕ್ಷ ಕೆ ಹಾರಾಗಿದ್ದು ಈ ಭಾರಿ 3.51ಲಕ್ಷ ರೂಪಾಯಿ ಗೆ ಹರಾಜಾಗಿದ್ದು, ಸಂತೆ ಮಾರುಕಟ್ಟೆ ಸುಂಕ ಕಳೆದ ಬಾರಿ 9.5ಲಕ್ಷ ರುಪಾಯಿಗೆ ಹರಾಜಾಗಿದ್ದು ಈ ಬಾರಿ11.5ಲಕ್ಷ ರೂಪಾಯಿ ಗಳಿಗೆ ಹರಾಜಾಗಿದ್ದು ಆದಾಯ ಹೆಚ್ಚಲು ಕಾರಣವಾಯಿತು. ಹರಾಜು ಪ್ರಕ್ರಿಯೆ ಸಂದರ್ಭ ಆರೋಗ್ಯ ನಿರೀಕ್ಷಕ ಜಾಸಿಂಖಾನ್, ಸಿಬ್ಬಂದಿಗಳಾದ ಜೀವನ್,ಭಾವನ,ರೂಪ ಮಹೇಂದ್ರ,ಹಾಗೂ ಅರುಣ್ ಉಪಸ್ತಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0