Kodagu

ಸೋಮವಾರಪೇಟೆ: ಒಂದುವರೆ ಅಡಿ ಉದ್ದದ ಬೃಹತ್ ಎರೆಹುಳು

admincoorgdaily

ಸೋಮವಾರಪೇಟೆ: ಒಂದುವರೆ ಅಡಿ ಉದ್ದದ ಬೃಹತ್ ಎರೆಹುಳು

ಮಡಿಕೇರಿ,: ಸೋಮವಾರಪೇಟೆ ತಾಲ್ಲೂಕಿನ ಕುಮಾರಳ್ಳಿ ಭಾಗದಲ್ಲಿ 43 ಇಂಚು -ಸುಮಾರು ಒಂದುವರೆ ಅಡಿ ಉದ್ದದ ಬೃಹತ್ ಎರೆಹುಳವೊಂದು ಪತ್ತೆಯಾಗಿದೆ. ಕುಮಾರಳ್ಳಿಯ ಆಯತನ ರೆಸಾರ್ಟ್ ಆವರಣದಲ್ಲಿ ಮಣ್ಣಿನಡಿ ಕಂಡುಬಂದ ಈ ಎರೆಹುಳವನ್ನು ಸಿಬ್ಬಂದಿ ಪತ್ತೆಹಚ್ಚಿದರು.

ಅಳತೆ ಮಾಡಿದ ಬಳಿಕ ಮತ್ತೆ ಅದೇ ಸ್ಥಳದಲ್ಲಿ ಸುರಕ್ಷಿತವಾಗಿ ಬಿಡಲಾಗಿದೆ ಎಂದು ರೆಸಾರ್ಟ್ ಮುಖ್ಯಸ್ಥರು ತಿಳಿಸಿದ್ದಾರೆ. ಭಾರತದಲ್ಲಿ ಸಾಮಾನ್ಯವಾಗಿ ಕಂಡುಬರುವ ಎರೆಹುಳಗಳು 5 ರಿಂದ 6 ಇಂಚು ಉದ್ದ ಬೆಳೆಯುತ್ತವೆ.

ಆದರೆ ಪಶ್ಚಿಮ ಘಟ್ಟದ ಮಳೆಕಾಡುಗಳಲ್ಲಿ ಡ್ರಾವಿಡಾ ಗ್ರಾಂಡಿಸ್_ ಸೇರಿದಂತೆ ಕೆಲವು ಸ್ಥಳೀಯ ತಳಿಗಳು 40 ಇಂಚಿಗೂ ಹೆಚ್ಚು ಉದ್ದ ಬೆಳೆಯುವುದುಂಟು. ಇವು ಅತ್ಯಂತ ಅಪರೂಪವಾಗಿದ್ದು, ಫಲವತ್ತಾದ ಮಣ್ಣಿನ ಸೂಚಕವಾಗಿವೆ ಎಂದು ತಜ್ಞರು ಹೇಳುತ್ತಾರೆ.