ಸೋಮವಾರಪೇಟೆ: ರಕ್ತದಾನ ಶಿಬಿರ ಹಾಗೂ ಯುವಜನಾಂಗದ ಹೆಚ್ಚುತ್ತಿರುವ ಹೃದಯಾಘಾತ ಮತ್ತು ಪಾರ್ಶ್ವವಾಯು ಜಾಗೃತಿ ಶಿಬಿರ

Aug 17, 2026 - 19:34
 0  36
ಸೋಮವಾರಪೇಟೆ: ರಕ್ತದಾನ ಶಿಬಿರ ಹಾಗೂ ಯುವಜನಾಂಗದ ಹೆಚ್ಚುತ್ತಿರುವ ಹೃದಯಾಘಾತ ಮತ್ತು ಪಾರ್ಶ್ವವಾಯು ಜಾಗೃತಿ ಶಿಬಿರ

ಸೋಮವಾರಪೇಟೆ:ಬದಲಾದ ಜೀವನ ಶೈಲಿಯಿಂದ ಹಾದಿ ತಪ್ಪುತ್ತಿರುವ ಯುವಜನಾಂಗ ದೇವರಿಗೆ ರಕ್ತದಾನದಬಗ್ಗೆ ಅರಿವು ಮೂಡಿಸುವ ಅನಿವಾರ್ಯತೆ ಇದೆಯೆಂದು ತಾಲೂಕು ದಂಡಾಧಿಕಾರಿ ಹಾಗೂ ತಹಸೀಲ್ದಾರ್ ಕೃಷ್ಣಮೂರ್ತಿ ತಿಳಿಸಿದರು.

ತಥಾಸ್ತು ಸಾತ್ವಿಕ ಸಂಸ್ಥೆ ಹಾಗೂ ಅಬಕಾರಿ ಇಲಾಖೆ,ಅಬಕಾರಿ ನಿರೀಕ್ಷಕರು,ವಿಚಕ್ಷಣಾದಳ ಕುವೆಂಪುನಗರ ಮೈಸೂರು ಇವರ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರ ಹಾಗೂ ಯುವಜನಾಂಗದ ಹೆಚ್ಚುತ್ತಿರುವ ಹೃದಯಾಘಾತ ಮತ್ತು ಪಾರ್ಶ್ವವಾಯು ಜಾಗೃತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ರಕ್ತದಾನದಬಗ್ಗೆ ಸರ್ಕಾರ ಹಾಗೂ ಸರ್ಕಾರ ಸಾಕಷ್ಟು ಅರಿವು ಮೂಡಿಸುತ್ತಿದ್ದರು ಸಹ ಜನರಲ್ಲಿ ಅರಿವು ಮೂಡಿಸಲು ಸಾಧ್ಯವಾಗುತ್ತಿಲ್ಲವೆಂದು ವಿಷಾಧಿಸಿದ ಅವರು ಯುವ ಜನತೆಗೆ ಈ ಬಗ್ಗೆ ಅರಿವಿರಬೇಕು ಆದರೆ ಇಂದು ಆಧುನಿಕ ಜೀವನ ಶೈಲಿಯಿಂದ ಹಾಡಿತಪ್ಪುತಿರುವ ಇವರಲ್ಲಿ ಮೊದಲು ಅರಿವು ಮೂಡಿಸಬೇಕಾದ ಅನಿವಾರ್ಯತೆ ಇದೆ ಎಂದರು.

ರಕ್ತದಾನದಿಂದ ಅಪಾಯದಲ್ಲಿರುವ ವ್ಯಕ್ತಿಗಳ ಜೀವ ಉಳಿಸಲು ಸಹಕಾರಿಯಾಗುತ್ತದೆ ಆದ್ದರಿಂದ ಆರೋಗ್ಯವಂತ ಜನರು ರಕ್ತದಾನಮಾಡಬೇಕೆಂದರೂ.

ಕಾರ್ಯಕ್ರಮದಲ್ಲಿ ಸರ್ಕಾರಿ ಆಸ್ಪತ್ರೆ ವೈದ್ಯರಾದ ಡಾ.ಕಿರಣ್ ಮಾತನಾಡಿ ಆಧುನಿಕ ಜೀವನ ಜೀವನ, ಬದಲಾದ ಆಹಾರಪದ್ಧತಿಯಿಂದಾಗಿ ಯುವಜನರು ಹೃದಯಾಘಾತ ಹಾಗೂ ಪಾರ್ಶ್ವವಾಯುವಿಗೆ ಬಲಿಯಾಗುತ್ತಿದ್ದಾರೆ ಎಂದು ವಿಷಾದಿಸಿದರು.

ಇಂದು ಜನರು ಒತ್ತಡದ ಜೀನದಿಂದಾಗಿ ಅಗತ್ಯವಾದ ನಿದ್ದೆ,ವಿಶ್ರಾತಿ ಇಲ್ಲಾ.ಬಹುತೇಕ ಜನ ಫಾಸ್ಟ್ ಹಾಗೂ ಜಂಕ್ ಫುಡ್ ಗಳಿಗೆ ಮಾರುಹೋಗಿದ್ದಾರೆ ಇದು ಆರೋಗ್ಯದಮೇಲೆ ಹೆಚ್ಚಿನ ಪರಿಣಾಮ ಬೀರುತಿದೆ ಇದು ಮನುಷ್ಯನ ರಕ್ತ ಹಾಗೂ ಹೃದಯದ ಮೇಲೆ ಹೆಚ್ಚಿನ ಒತ್ತಡ ಹೇರುತಿದೆ.ವ್ಯಾಯಾಮ ವಿಲ್ಲದ ದೇಹದಲ್ಲಿ ಹೆಚ್ಚಿನ ಕೊಬ್ಬು ಸಂಗ್ರಹಣೆಯಾಗುತಿದೆ ಇದು ಮನುಷ್ಯನನ್ನ ಹೃದಯಾಘಾತ,ಪಾರ್ಶ್ವವಾಯುವಿಗೆ ತಳ್ಳುತ್ತಿದೆ ಆದ್ದರಿಂದ ಹೆಚ್ಚಿಗೆ ಸೊಪ್ಪು,ತರಕಾರಿ ಸೇವಿಸಿ,ನಿಯಮಿತ ವ್ಯಾಯಾಮ ಅತವಾ ವಾಕಿಂಗ್ ಮಾಡಿ ಎಂದು ಸಲಹೆ ನೀಡಿದ ಅವರು ಇಂದಿನ ಯುವಕರು ಮಾದಕವ್ಯಸನಿಗಳಾಗುತ್ತಿರುವುದರುಂದಲು ಹೃದಯ ಬಡಿತ ನಿಲ್ಲುತ್ತಿದೆ ಎಂದು ಎಚ್ಚರಿಸಿದರು.

ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರ ಡಾ.ಜಮೀರ್ ರವರು ಮಾತನಾಡಿ ಜನರು ರಕ್ತದಾನಮಾಡಲು ಮುಂದಾಗಬೇಕು ತುರ್ತು ಸಂದರ್ಭಗಳಲ್ಲಿ ರಕ್ತ ಸಿಗದೆ ಹಲವು ಜನ ಜೀವ ಕಳೆದುಕೊಂಡಿದ್ದಾರೆ ಎಂದು ವಿಷಾದಿಸಿದರು. ಅಪಘಾತ ಅಥವಾ ಶಸ್ತ್ರ ಚಿಕಿತ್ಸೆ ಸಂದರ್ಭ ಆಸ್ಪತ್ರೆಗಳಲ್ಲಿ ರಕ್ತದಾಸ್ತಾನು ಇರಬೇಕಾಗುತ್ತದೆ ಆದ್ದರಿಂದ ಆರೋಗ್ಯವಂತ ಜನರು ಮತ್ತೊಂದು ಜೀವ ಉಳಿಸಲು ರಕ್ತ ನೀಡುವುದರಿಂದ ಸಹಕಾರಿಯಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ತಥಾಸ್ತು ಸಂಸ್ಥೆಯ ಅಧ್ಯಕ್ಷ ಉದಯ್ ಮಾಳ ವಹಿಸಿದ್ದರು.ಅಬಕಾರಿ ಇಲಾಖೆ ನಿರೀಕ್ಷಕ ಲೋಕೇಶ್ ಸುವರ್ಣ,ಪಟ್ಟಣಪಂಚಾಯಿತಿ ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್, ಜಿಲ್ಲಾ ರಕ್ತನಿಧಿ ಘಟಕದ ವೈದ್ಯರಾದ ಡಾ.ಕರುಂಬಯ್ಯ,ಪಟ್ಟಣ ಪಂಚಾಯಿತಿ ಆರೋಗ್ಯ ನಿರೀಕ್ಷಕ ಜಾಸಿಂಖಾನ್,ವಿದ್ಯಾ ನರ್ಸಿಂಗ್ ಶಾಲೆಯ ಮುಖ್ಯಸ್ಥರಾದ ಸುಲೇಮಾನ್ ಹಾಗೂ ಆಲಿಮಾ ತಥಾಸ್ತು ಸಂಸ್ಥೆಯ ಶಿವಕುಮಾರ್,ರಮೇಶ್,ಜನಾರ್ದನ, ರಮೇಶ್ ಮರಗೋಡು ಹಾಗೂ ಮುಂತಾದವರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0