ಸೋಮವಾರಪೇಟೆ;ಗಾಂಜಾ ಮಾರಾಟ/ಸೇವನೆ:ಯುವತಿ ಸೇರಿ ಐವರ ಬಂಧನ
ಮಡಿಕೇರಿ:ಸೋಮವಾರಪೇಟೆ ಮತ್ತು ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಿಷೇಧಿತ ಮಾದಕ ವಸ್ತು. ಗಾಂಜಾ ಮಾರಾಟ/ಸರಬರಾಜು ಮಾಡುತ್ತಿದ್ದ ವ್ಯಕ್ತಿಗಳನ್ನು ಪತ್ತೆ ಹಚ್ಚುವಲ್ಲಿ ಕೊಡಗು ಜಿಲ್ಲಾ ಪೊಲೀಸ್ ಯಶಸ್ವಿಯಾಗಿದೆ.
ನಿಷೇಧಿತ ಮಾದಕ ವಸ್ತುಗಳ ಮಾರಾಟ/ಸರಬರಾಜು/ ಬಳಕೆಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮಾದಾಪುರದಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾ ಮಾರಾಟ/ಸೇವನೆ ಕುರಿತು ಖಚಿತ ಮಾಹಿತಿ ಹಿನ್ನೆಲೆಯಲ್ಲಿ ದಿನಾಂಕ: 01-02-2026 ರಂದು ದಾಳಿ ನಡೆಸಿ 04 ಜನರನ್ನು ಹಾಗೂ ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡ್ಲಿಪೇಟೆಯಲ್ಲಿ ದಿನಾಂಕ: 02-02-2026 ರಂದು ದಾಳಿ ನಡೆಸಿ ಒಬ್ಬ ಆರೋಪಿಯನ್ನು ನಿಷೇಧಿತ ಮಾದಕ ವಸ್ತುವಿನೊಂದಿಗೆ ದಸ್ತಗಿರಿ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗಿರುತ್ತದೆ.
ಸದರಿ ಆರೋಪಿಗಳ ವಿರುದ್ಧ ಸೋಮವಾರಪೇಟೆ ಮತ್ತು ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಕಲಂ: 20(6) NDPS Act ಅಡಿಯಲ್ಲಿ ಪ್ರಕರಣ ದಾಖಲಿಸಿ ಘನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.
ಆರೋಪಿಗಳ ವಿವರ:
1. ಆಕಾಶ್.ಎಂ.ಸಿ. 21 ವರ್ಷ, ಮಾದಾಪುರ, ಸೋಮವಾರಪೇಟೆ.
2. ಕ್ರಿಶೂಲ್.ಪಿ.ಎಲ್. 21 ವರ್ಷ, ಹೊಸ ಬಡಾವಣೆ, ಮಡಿಕೇರಿ
3. ನಿತ್ಯ 20 ವರ್ಷ ಮಡಿಕೇರಿ ನಿವಾಸಿ
4. ಧನುಷ್.ಕೆ.ಆರ್. 22 ವರ್ಷ, ಜಾಲ್ಲೂರು, ಸುಳ್ಯ,
5. ಭರತ್.ಕೆ.ಎಂ. 28 ವರ್ಷ, ಶಾಂತಪುರ, ಕೊಡ್ಲಿಪೇಟೆ, ಶನಿವಾರಸಂತೆ
ವಶಪಡಿಸಿಕೊಂಡ ಸ್ವತ್ತುಗಳ ವಿವರ;
1. 1 ಕೆಜಿ 628 ಗ್ರಾಂ ಗಾಂಜಾ (ಸೋಮವಾಪೇಟೆ ಪೂ.ಠಾ. 753 ಗ್ರಾ & ಶನಿವಾರಸಂತೆ ಪೊ.ಠಾ. 875 ಗ್ರಾಂ)