ಸೋಮವಾರಪೇಟೆ;ಕಾಡಿನ ನಡು ರಸ್ತೆಯಲ್ಲೇ ದೈತ್ಯ ಹೆಬ್ಬಾವಿನ ಸಂಚಾರ

May 29, 2026 - 20:44
 0  2.3k
ಸೋಮವಾರಪೇಟೆ;ಕಾಡಿನ ನಡು ರಸ್ತೆಯಲ್ಲೇ ದೈತ್ಯ ಹೆಬ್ಬಾವಿನ ಸಂಚಾರ

ಮಡಿಕೇರಿ: ಕಾಡಿನ ರಸ್ತೆಗಳಲ್ಲಿ ಸಂಚರಿಸುವಾಗ ಬಲು ಎಚ್ಚರಿಕೆ ಅಗತ್ಯ. ಯಾಕೆಂದರೆ, ನಮ್ಮಿಂದ ಕಾಡಿನಲ್ಲಿರುವ ಜೀವಿಗಳಿಗೆ ತೊಂದರೆ ಆಗಬಾರದು. ಒಂದೊಂದು ಸಲ ಕಾಡಿನ ರಸ್ತೆಯಲ್ಲಿ ಸಾಗುವಾಗ ಅಪರೂಪದ ಘಟನೆಗಳು ಕಾಣಸಿಗುತ್ತವೆ. ಸದ್ಯ ಅಂತಹದ್ದೊಂದು ವಿಡಿಯೋ ವೈರಲ್ ಆಗುತ್ತಿದೆ.

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡು ರಸ್ತೆಯಲ್ಲೇ ದೈತ್ಯ ಹೆಬ್ಬಾವು (Python) ಕಾಣಿಸಿಕೊಂಡಿದೆ. ಸಜ್ಜಳ್ಳಿ – ಯಡವನಾಡು ಸಂಪರ್ಕ ರಸ್ತೆಯ ಚೈನ್‌ಗೇಟ್ ಸಮೀಪ ರಾತ್ರಿ ವೇಳೆ ಹೆಬ್ಬಾವು ರಸ್ತೆ ದಾಟುತ್ತಿದ್ದ ದೃಶ್ಯ ಕಂಡು ವಾಹನ ಸವಾರರು ಆತಂಕಗೊಂಡಿದ್ದಾರೆ.

ಯಡವಾರೆ ಗ್ರಾಮದ ನಿವಾಸಿ ಕಾಫಿ ಬೆಳಗಾರ ಪ್ರಕಾಶ್ ಬೆಳ್ಳಿಯಪ್ಪ ಅವರು, ಕುಟುಂಬ ಸಮೇತ ಜೀಪಿನಲ್ಲಿ ರಾತ್ರಿ ಸುಮಾರು 9 ಗಂಟೆ ವೇಳೆಗೆ ಕುಶಾಲನಗರದಿಂದ ಮನೆಗೆ ತೆರಳುತ್ತಿದ್ದರು. ಈ ವೇಳೆ ರಸ್ತೆ ಮಧ್ಯೆ ಹೆಬ್ಬಾವು ಹರಿಯುತ್ತಿದ್ದ ದೃಶ್ಯ ಕಂಡುಬಂದಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 1
Sad Sad 0
Wow Wow 1