ಸೋಮವಾರಪೇಟೆ: ವಾಕರ್ಸ್ ವಿಂಗ್ ಸಂಸ್ಥೆಯ 2026—27ನೇ ಸಾಲಿನ ನೂತನ ಅಧ್ಯಕ್ಷರಾಗಿ ಹರ್ಷ ಆಯ್ಕೆ

Jul 25, 2026 - 15:04
 0  44
ಸೋಮವಾರಪೇಟೆ: ವಾಕರ್ಸ್ ವಿಂಗ್ ಸಂಸ್ಥೆಯ 2026—27ನೇ ಸಾಲಿನ ನೂತನ ಅಧ್ಯಕ್ಷರಾಗಿ ಹರ್ಷ ಆಯ್ಕೆ

ಸೋಮವಾರಪೇಟೆ: ಸಮಾಜಮುಖಿ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿರುವ ವಾಕರ್ಸ್ ವಿಂಗ್ ಸಂಸ್ಥೆಯ 2026—27ನೇ ಸಾಲಿನ ನೂತನ ಅಧ್ಯಕ್ಷರಾಗಿ ಹರ್ಷ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಂಪಿಯ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಂಸ್ಥೆಯ 21ನೇ ವರ್ಷದ ವಾರ್ಷಿಕ ಮಹಾಸಭೆಯಲ್ಲಿ ನಿರ್ಗಮಿತ ಅಧ್ಯಕ್ಷ ದಿನೇಶ್ ಬೆಳ್ಳಿಯಪ್ಪ ಅವರು ನೂತನ ಅಧ್ಯಕ್ಷ ಹರ್ಷ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

ಇದೇ ವೇಳೆ 2026—27ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಸಂಸ್ಥೆಯ ಕಾರ್ಯದರ್ಶಿಯಾಗಿ ಎಸ್.ಡಿ. ವಿಜೇತ್ ಹಾಗೂ ಖಜಾಂಚಿಯಾಗಿ ಬಿ.ಕೆ. ಉದಯ್ ಕುಮಾರ್ ಆಯ್ಕೆಯಾಗಿದ್ದಾರೆ.

ಕಾರ್ಯಕ್ರಮದಲ್ಲಿ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಎ.ಸಿ. ಶಿವಪ್ರಸಾದ್, ಎಚ್.ಸಿ. ನಾಗೇಶ್, ಪಿ.ಕೆ. ರವಿ, ಬಿ.ಎಸ್. ಸುಂದರ್, ಮೋಹನ್ ನಿಶಾಂತ್, ನವೀನ್ ಧರ್ಮಪ್ಪ, ಉದಯ ರವಿ, ಎಚ್.ಬಿ. ಹೃಷಿಕೇಶ್, ಬಿ.ಸಿ. ವೆಂಕಟೇಶ್, ಬಿ.ಎಂ. ದಿನೇಶ್, ಬಿ.ಟಿ. ತಿಮ್ಮಶೆಟ್ಟಿ ಮತ್ತಿತರರು ಇದ್ದರು. ಸಭೆಯಲ್ಲಿ ಸಂಸ್ಥೆಯ ಕಳೆದ ಸಾಲಿನ ಚಟುವಟಿಕೆಗಳ ಕುರಿತು ಪರಿಶೀಲನೆ ನಡೆಸಿ, ಮುಂಬರುವ ವರ್ಷದಲ್ಲಿ ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಕುರಿತು ಚರ್ಚಿಸಲಾಯಿತು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0