ಸೋಮವಾರಪೇಟೆ: ದೊಡ್ಡ ಮಾರಿಯಮ್ಮ ದೇವಾಲಯ ಸಮಿತಿ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

Aug 15, 2026 - 11:57
 0  25
ಸೋಮವಾರಪೇಟೆ: ದೊಡ್ಡ ಮಾರಿಯಮ್ಮ ದೇವಾಲಯ ಸಮಿತಿ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

ಸೋಮವಾರಪೇಟೆ:- ಪಟ್ಟಣಕ್ಕೆ ಸಮೀಪದ ಗಾಂಧಿನಗರದ ದೊಡ್ಡ ಮಾರಿಯಮ್ಮ ದೇವಾಲಯ ಸಮಿತಿವತಿಯಿಂದ ದೇವಾಲಯದ ಆವರಣದಲ್ಲಿ ಎಂಬತ್ತನೆ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

 ಚೌಡ್ಲು ಗ್ರಾಮಪಂಚಾಯ್ತಿ ಮಾಜಿ ಅಧ್ಯಕ್ಷ ಮಹೇಶ್ ತಿಮ್ಮಯ್ಯ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ಪತ್ರಕರ್ತ ಎಸ್.ಮಹೇಶ್,ದೇವಾಲಯ ಸಮಿತಿ ಅಧ್ಯಕ್ಷ ರಾಮದಾಸ್,ಮಾಜಿ ಅಧ್ಯಕ್ಷರಾದ ಚಿಂತು ಹಾಗೂ ಮಂಜುನಾಥ ಚೌಡ್ಲು ಪಂಚಾಯತಿ ಮಾಜಿ ಸದಸ್ಯರಾದ ಪ್ರವೀಣ್ ಕುಮಾರ್, ಸುರೇಶೇಟ್ಟಿ.ದೇವಾಲಯದ ಆಡಳಿತ ಮಂಡಳಿ ಈಶ್ವರ್ , ಪ್ರಜ್ವಲ್ ಹಾಗೂ ಗ್ರಾಮಸ್ಥರು ಹಾಜರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0