ಸೋಮವಾರಪೇಟೆ; ಜೇನಿಗರಕೊಪ್ಪ ಗ್ರಾಮದಲ್ಲಿ ರೋಟರಿ ಕ್ಲಬ್ ವತಿಯಿಂದ ಗದ್ದೆನಾಟಿ-ಕೃಷಿ ಸಂಭ್ರಮ

Aug 11, 2026 - 12:03
 0  39
ಸೋಮವಾರಪೇಟೆ; ಜೇನಿಗರಕೊಪ್ಪ ಗ್ರಾಮದಲ್ಲಿ ರೋಟರಿ ಕ್ಲಬ್ ವತಿಯಿಂದ  ಗದ್ದೆನಾಟಿ-ಕೃಷಿ ಸಂಭ್ರಮ

ಸೋಮವಾರಪೇಟೆ: ಮಣ್ಣಿನ ಮಗನ ಬೆವರಿನ ಹನಿ ದೇಶದ ಸಂಪತ್ತಿನ ಗಣಿ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಹಾಗು ರೋಟೇರಿಯನ್ ಡಾ. ಮಂತರ್ ಗೌಡ ಹೇಳಿದರು. ರೋಟರಿ ಕ್ಲಬ್ ಆಫ್ ಸೋಮವಾರಪೇಟೆ ಹಿಲ್ಸ್ ಹಾಗೂ ಜೇನಿಗರಕೊಪ್ಪ ಗ್ರಾಮಸ್ಥರ ಸಹಕಾರದಲ್ಲಿ ನೇಗಿಲ ಯೋಗಿ ರೈತ ನಮ್ಮ ದೇಶದ ಬೆನ್ನೆಲುಬು ಎಂಬ ಆಶಯದೊಂದಿಗೆ ಭಾನುವಾರ ಆಯೋಜಿಸಿದ್ದಗದ್ದೆ ನಾಟಿ—ಕೃಷಿ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಗದ್ದೆಗಳನ್ನು ವಾಣಿಜ್ಯ ಬೆಳೆಗಳಿಗಾಗಿ ಪರಿವರ್ತಿಸದೆ, ಮುಂದಿನ ಪೀಳಿಗೆಗೆ ಆಹಾರದ ಭದ್ರತೆ ಕಲ್ಪಿಸುವ ನಿಟ್ಟಿನಲ್ಲಿ ಭತ್ತ ಬೆಳೆಯುವ ಪರಂಪರೆಯನ್ನು ಉಳಿಸಬೇಕು. ಎಂದು ಹೇಳಿದರು. ರೋಟರಿ ಸಂಸ್ಥೆ ಅಧ್ಯಕ್ಷ ಬಿ.ಎಸ್. ಸುಂದರ್, ಕಾರ್ಯದರ್ಶಿ ಪಿ.ಕೆ. ರವಿ, ಜೇನಿಗರಕೊಪ್ಪ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಜೆ.ಕೆ.ಪೊನ್ನಪ್ಪ, ಕಾರ್ಯದರ್ಶಿ ಹರೀಶ್ ಇದ್ದರು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೋಟರಿ ಸದಸ್ಯರು, ಮಹಿಳೆಯರು ಹಾಗೂ ಮಕ್ಕಳು ಪಾಲ್ಗೊಂಡು ಉತ್ಸಾಹದಿಂದ ಗದ್ದೆ ನಾಟಿ ಮಾಡಿದರು. ಬಳಿಕ ಮಧ್ಯಾಹ್ನದ ಊಟ ಹಾಗೂ ಫೆಲೋಶಿಪ್ ಕಾರ್ಯಕ್ರಮ ನಡೆಯಿತು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0