Kodagu

ಸೋಮವಾರಪೇಟೆ: ರೋಟರಿ ಸಂಸ್ಥೆ ವತಿಯಿಂದ 27ನೇ ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ವೀರಮರಣ ಹೊಂದಿದ ಸೈನಿಕರಿಗೆ ಪುಷ್ಪ ನಮನ

admincoorgdaily

ಸೋಮವಾರಪೇಟೆ: ರೋಟರಿ ಸಂಸ್ಥೆ ವತಿಯಿಂದ 27ನೇ ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ವೀರಮರಣ ಹೊಂದಿದ ಸೈನಿಕರಿಗೆ ಪುಷ್ಪ ನಮನ

ಸೋಮವಾರಪೇಟೆ: ರೋಟರಿ ಸಂಸ್ಥೆ ವತಿಯಿಂದ 27 ನೇ ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ವೀರಮರಣ ಹೊಂದಿದ ಸೈನಿಕರಿಗೆ ಪುಷ್ಪ ನಮನ, ಗಾನ ನಮನ, ನುಡಿ ನಮನ ಕಾರ್ಯಕ್ರಮ ರೋಟರಿ ಭವನದಲ್ಲಿ ಈಚೆಗೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಸಂಸ್ಥೆ ಅಧ್ಯಕ್ಷ ಬಿ.ಎಸ್. ಸುಂದರ್ ವಹಿಸಿದ್ದರು.

ಕಾರ್ಯಕ್ರಮದ ಅಂಗವಾಗಿ ಮಾಜಿ ಸೈನಿಕರಾದ ಡಾ. ಕೆ.ಜಿ. ಲೋಹಿತ್, ಬಿ.ಟಿ. ರೂಪೇಶ್ ಹಾಗೂ ಜಿ.ಸಿ. ಗಣೇಶ್ ಅವರುಗಳನ್ನು ಸನ್ಮಾನಿಸಲಾಯಿತು. ಮೆದುಳಿನಲ್ಲಿ ರಕ್ತಶ್ರಾವ ಆಗಿ ಮೈಸೂರಿನ ಜೆಎಸ್‌ಎಸ್ ಹಾಸ್ಪಿಟಲ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಯ ಕುಟುಂಬದವರಿಗೆ 10 ಸಾವಿರ ರೂ.ಗಳ ಆರ್ಥಿಕ ನೆರವು ನೀಡಲಾಯಿತು. ಕಾರ್ಯಕ್ರಮದಲ್ಲಿ ವಲಯ ಸೇನಾನಿ ಎ.ಎಸ್. ಮಲ್ಲೇಶ್, ಕಾರ್ಯದರ್ಶಿ ಪಿ.ಕೆ. ರವಿ ಇದ್ದರು.