ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಪ್ರಮುಖ ಫೈಲ್ ನಾಪತ್ತೆ
ಸೋಮವಾರಪೇಟೆ: ಪಟ್ಟಣ ಪಂಚಾಯಿತಿಯ ಪ್ರಮುಖ ಖಡತ ನಾಪತ್ತೆಯಾಗಿರುವ ಬಗ್ಗೆ ಸದಸ್ಯರು ಆರೋಪಿಸಿದ್ದು,ಸಿಬ್ಬಂದಿ ಕೈಚಳಕದ ಶಂಕೆ ವ್ಯಕ್ತವಾಗಿದೆ ಪೊಲೀಸ್ ದೂರು ನೀಡಲು ಸದಸ್ಯರ ಒತ್ತಾಯಿಸಿದ್ದಾರೆ. ಅಧ್ಯಕ್ಷರ ಕೊಠಡಿಯಲ್ಲಿ ಗುಪ್ತ ಸಭೆ ನಡೆಯುತ್ತಿದ್ದು, ಸಿಸಿ ಟಿವಿ ಫೂಟೇಜ್ ಪರಿಶೀಲಿಸಲು ಮುಖ್ಯಾಧಿಕಾರಿ ಹಿಂದೇಟು ಹಾಕಿದ್ದಾರೆ. ಕಳೆದವಾರ ಚರ್ಚೆ ನಡೆಸಿ ಸಭೆಗೆ ಇಡಲು ತಿಳಿಸಿದ್ದ ಕಡತ 2 ದಿನಗಳಿಂದ ನಾಪತ್ತೆಯಾಗಿದ್ದು, ಕ್ರಮಕ್ಕೆ ಸದಸ್ಯರು ಆಗ್ರಹಿಸಿ,ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದೀಗ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಪ್ರಮುಖ ಫೈಲ್ ಎಗರಿಸಿದ್ದು ಯಾರೆಂಬ ಪ್ರಶ್ನೆ ಉದ್ಭವಿಸಿದೆ.