ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಫೈಲ್ ಕಳ್ಳತನ ಪ್ರಕರಣ: ಮಹಿಳಾ ಸಿಬ್ಬಂದಿಯ ಕೈಚಳಕ

ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಫೈಲ್ ಕಳ್ಳತನ ಪ್ರಕರಣ: ಮಹಿಳಾ ಸಿಬ್ಬಂದಿಯ ಕೈಚಳಕ

ಸೋಮವಾರಪೇಟೆ:- ಇಲ್ಲಿನ ಪಟ್ಟಣ ಪಂಚಾಯಿತಿ ಪ್ರಮುಖ ಖಡತ ನಾಪತ್ತೆ ಸಂಬಂಧಿಸಿದ್ದಂತೆ ಕೊನೆಗೂ ತಿರುವು ಸಿಕ್ಕಿದೆ. ಪಂಚಾಯ್ತಿಯ ಹಂಗಾಮಿ(ಅನಧಿಕೃತ) ಮಹಿಳಾ ಸಿಬ್ಬಂದಿಯವರು ತಮ್ಮ ಕೈಚಳಕ ತೋರಿರುವುದು ಸಿಸಿ ಟಿವಿಯಲ್ಲಿ ದಾಖಲಾಗಿದ್ದು ,ಪ್ರಕರಣದಿಂದಾಗಿ ಕೆಲಸ ಕಳೆದುಕೊಂಡು ಮನೆಸೇರುವಂತಾಗಿದೆ. ಪಟ್ಟಣ ಪಂಚಾಯಿತಿಯಲ್ಲಿ ಕಳೆದ ಶುಕ್ರವಾರ ಸದಸ್ಯರ ಕೌನ್ಸಿಲಿಂಗ್ ಸಭೆ ನಡೆದಿತ್ತು. ಸಭೆಯಲ್ಲಿ ಪೌರ ಕಾರ್ಮಿಕರ ವಸತಿ ಹಂಚಿಕೆಗಳ ಬಗ್ಗೆ ತೀವ್ರ ಚರ್ಚೆಯಾಗಿ 16 ವಸತಿಗಳಲ್ಲಿ 15 ವಸತಿಗಳು ಹಂಚಿಕೆಯಾಗಿದ್ದವು ಈ ಹಂಚಿಕೆಯಾದ ಕಡತಗಳು ಎರಡು ದಿನಗಳ ನಂತರ ನಾಪತ್ತೆಯಾಗಿತು ಈ ಸಂಬಂಧ ಸದಸ್ಯರ ಒಳಗೊಂಡಂತೆ ತೀವ್ರ ಚರ್ಚೆಗೆ ಗ್ರಾಸವಾಗಿ ನಂತರ ಇದು ಪೊಲೀಸ್ ಸ್ಟೇಷನ್ ಮೆಟ್ಟಿಲೇರಿತು. ನಂತರ ಪ್ರಕಾರಣವನ್ನು ಸಿ ಸಿ ಟಿವಿ ಪುಟೇಜ್ ಪರಿಶೀಲಿಸಿ ನಂತರ ಮುಂದಿನ ಕ್ರಮ ಕೈಗೊಳುವುದಾಗಿ ಆಡಳಿತ ಮಂಡಳಿ ತೀರ್ಮಾನಿಸಿದ್ದು ನಂತರ ಪರಿಶೀಲಿಸಲಾಗಿತು. ಪರಿಶೀಲಿಸಿ ದ ನಂತರ ಕಚೇರಿಯಲ್ಲಿ ಗುತ್ತಿಗೆ ಆದರದ ಮೇಲೆ ಕೆಲಸ ಮಾಡುವ ಶ್ವೇತ ಎಂದು ತಿಳಿದು ಬಂದಿದ್ದೆ.ಈ ಕಡತ ನಾಪತ್ತೆ ಮಾಡಿರುವ ಬಗ್ಗೆ ಪರಿಶೀಲುಸುತ್ತೆವೆ ಎಂದು ತಿಳಿಸಿ. ಶ್ವೇತ ಇವರನ್ನು ಆಡಳಿತ ಮಂಡಳಿ ಹಾಗು ಕಾರ್ಯನಿರ್ವಹಣಾಧಿಕಾರಿ ತತ್ತಕ್ಷಣಕ್ಕೆ ಕೆಲಸದಿಂದ ವಜಾ ಗೊಳಿಸಿ ಆದೇಶ ಮಾಡಿದೆ.