ಸೋಮವಾರಪೇಟೆ ಪಟ್ಟಣ ಪಂಚಾಯಿತಿ 2026-27ನೇ ಸಾಲಿನ ಆಯವ್ಯಯ ಮಂಡನೆ

Mar 10, 2026 - 16:43
 0  218
ಸೋಮವಾರಪೇಟೆ ಪಟ್ಟಣ ಪಂಚಾಯಿತಿ 2026-27ನೇ ಸಾಲಿನ ಆಯವ್ಯಯ ಮಂಡನೆ

ಸೋಮವಾರಪೇಟೆ:- ಇಲ್ಲಿನ ಪಟ್ಟಣ ಪಂಚಾಯಿತಿ 2026ಹಾಗೂ27ನೇ ಸಾಲಿನ ಆಯವ್ಯಯ ಮಂಡಿಸಿದ್ದು,1.82ಲಕ್ಷ ರೂ ಉಳಿತಾಯ ಅಂದಾಜಿಸಲಾಗಿದೆ.

ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪ್ರಸಕ್ತ ವರ್ಷದ ಆಯವ್ಯಯ ಮಂಡನಾ ಸಭೆಯಲ್ಲಿ ಆಡಳಿತಾಧಿಕಾರಿ,ತಹಸೀಲ್ದಾರ್ ಕೃಷ್ಣಮೂರ್ತಿ ಬಜೆಟ್ ಮಂಡಿಸಿದರು. 2026, 27ನೆ ಸಾಲಿನಲ್ಲಿ 1368.12ಲಕ್ಷ ಆದಾಯ ನಿರೀಕ್ಷಿಸಿದ್ದು,1366.30ಲಕ್ಷ ಖರ್ಚು ಅಂದಾಜಿಸಲಾಗಿದೆ,1.82ಲಕ್ಷ ಉಳಿತಾಯವಾಗಲಿದೆ ಎಂದಿದ್ದಾರೆ.  

ಈ ಭಾರಿ ಪಟ್ಟಣದ ಪಾರ್ಕ್ ಗಳ ಹಾಗೂ ಮೈದಾನಗಳ ನಿರ್ವಹಣೆಗೆ ಒತ್ತು ನೀಡುವುದರೊಂದಿಗೆ,ಘನತ್ಯಾಜ್ಯ ಸಂಸ್ಕರಣಾ ಘಟಕವನ್ನು ಮೇ ಅಂತ್ಯದೊಳಗೆ ಆರಂಭಿಸಲಾಗುವುದೆಂದು ಹೇಳಿದರು.8.33 ಚದರ ಕಿಲೋಮೀಟರ್ ವಿಸ್ತೀರ್ಣ ಹೊಂದಿರುವ ನಗರದಲ್ಲಿ ರಸ್ತೆ,ನೀರು,ಚರಂಡಿ,ನ ನೈರ್ಮಲ್ಯ ಬೀದಿ ದೀಪಗಳ ವ್ಯವಸ್ತೆ ಸೇರಿದಂತೆ ಮೂಲ ಸೌಕರ್ಯನೀಡುವ ಕಾರ್ಯ ಸಮರ್ಪಕವಾಗಿ ಆಗಬೇಕಾದಿದೆ ಹಾಗೂ ಅದಕ್ಕಾಗಿ ಒತ್ತು ನೀಡಲಾಗಿದೆ ಎಂದರು.

ಪ್ರಮುಖವಾಗಿ ವೇತನ ಅನುದಾನದಿಂದ 151 ಲಕ್ಷ,ವಿದ್ಯುತ್ ಅನುದಾನ 175ಲಕ್ಷ, ವಾಣಿಜ್ಯ ಮಳಿಗೆ ಬಾಡಿಗೆಯಿಂದ 65ಲಕ್ಷ, ಸೇರಿದಂತೆ ,ವಿಶೇಷ ಅನುದಾನ 1 ಕೋಟಿ,ಎಸ್.ಡಬ್ಲ್ಯೂ ಅನುದಾನ 1ಕೋಟಿ,ನಿವೇಶನ ಖರೀದಿಗಾಗಿ,1ಕೋಟಿ,ಮುಖ್ಯ ಮಂತ್ರಿಗಳ ನಿಧಿಯಿಂದ 1

 ಕೋಟಿ ಹೀಗೆ ವಿವಿಧ ಮೂಲಗಳಿಂದ ಒಟ್ಟು 1368.12ಲಕ್ಷ ಆದಾಯ ನಿರೀಕ್ಷಿಸಲಾಗಿದ್ದು.

ವೇತನ 151ಲಕ್ಷ, ನೀರು ಮತ್ತು ವಿದ್ಯುತ್ 175ಲಕ್ಷ,ನೈರ್ಮಲ್ಯ ಹೊರಗುತ್ತಿಗೆ ವೆಚ್ಚಕ್ಕಾಗಿ 25 ಲಕ್ಷ,ನೀರು ಸರಬರಾಜು ನೌಕರರ ವೆಚ್ಚ 20 ಲಕ್ಷ, ವಾಣಿಜ್ಯ ಮಳಿಗೆ ನಿರ್ವಹಣೆ ಹಾಗೂ ದುರಸ್ತಿಗಾಗಿ 30 ಲಕ್ಷ, ಪೇ ಪಾರ್ಕಿಂಗ್ ಯೋಜನೆಗಾಗಿ 80 ಲಕ್ಷ,ಗೃಹ ಭಾಗ್ಯ ವೆಚ್ಚ 23 ಲಕ್ಷ, ತಡೆಗೋಡೆ,ಚರಂಡಿ ಹಾಗೂ ರಸ್ತೆ ಕಾಮಗಾರಿಗಾಗಿ ತಲಾ 25 ಲಕ್ಷ ಸೇರಿದಂತೆ ವಿವಿಧ ಕಾರ್ಯಗಳಿಗೆ 1366.30ಲಕ್ಷ ಖರ್ಚು ಅಂದಾಜಿಸುವಿದರೊಂದಿಗೆ 1.82ಲಕ್ಷ ಉಳಿತಾಯವಾಗಲಿದೆ ಎಂದು ಆಡಳಿತಾಧಿಕಾರಿಗಳು ಸಭೆಯಲ್ಲಿ ತಿಳಿಸಿದರು.

ಸಭೆಯಲ್ಲಿ ಪಂಚಾಯಿತಿ ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್,ಅಭಿಯಂತರ ಹೇಮಂತ್ ಕುಮಾರ್,ಆರೋಗ್ಯ ನಿರೀಕ್ಷಕ ಜಾಸಿಂಖಾನ್, ವಿಷಯ ಸಂಗ್ರಾಹಕಿ ರೂಪ ಮಹೇಂದ್ರ ಕುಮಾರ್,ಲೆಕ್ಕಾಧಿಕಾರಿ ಭಾವನ ಹಾಗೂ ಪಂಚಾಯಿತಿ ಸಿಬ್ಬಂದಿಗಳು ಉಪಸ್ತಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0