ಸೋಮವಾರಪೇಟೆ;ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ವ್ಯಾಪ್ತಿಯ ಪದಾಧಿಕಾರಿಗಳ ತರಬೇತಿ ಕಾರ್ಯಕ್ರಮ
ಶನಿವಾರಸಂತೆ :ಸೋಮವಾರಪೇಟೆ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ವ್ಯಾಪ್ತಿಯ ಶನಿವಾರಸಂತೆ ವಲಯದಲ್ಲಿ ಒಕ್ಕೂಟದ ಪದಾಧಿಕಾರಿಗಳ ತರಬೇತಿ ಕಾರ್ಯಕ್ರಮ ಶನಿವಾರಸಂತೆ ನಂದಿಶ್ವರ ಕಲ್ಯಾಣ ಮಂಟಪ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ವಿಘ್ನೇಶ್ವರ ಪ್ರೌಢಶಾಲೆಯ ಶಿಕ್ಷಕ ಕೆ. ಪಿ ಜಯಕುಮಾರ್ ದೀಪ ಬೆಳಗಿಸಿದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಮಾತನಾಡಿ, ಒಕ್ಕೂಟದ ಪದಾಧಿಕಾರಿಗಳಲ್ಲಿ ಸಮಯ ಪ್ರಜ್ಞೆ ಹಾಗೂ ಶಿಸ್ತು ಇರಬೇಕು. ಈ ಎಲ್ಲಾ ಗುಣಗಳು ಧರ್ಮಸ್ಥಳ ಸಂಘದಲ್ಲಿ ಇದ್ದು, ಇದನ್ನು ಮುಂದುವರೆಸಿಕೊಂಡು ಹೋಗಬೇಕು ಎಂದರು ಜೊತೆಗೆ ನಾಯಕತ್ವದ ಬಗ್ಗೆ ತರಬೇತಿಯನ್ನು ನೀಡಿದರು.
ಯೋಜನಾಧಿಕಾರಿ ಹನುಮಂತ ಅಂಗಡಿ ಯೋಜನೆ ಪರಿಚಯ ಹಾಗೂ ಹಿನ್ನೆಲೆಯ ಬಗ್ಗೆ ಉತ್ತಮವಾದ ಮಾಹಿತಿಯನ್ನು ನೀಡಿದರು. ಕುಶಾಲನಗರ ವಲಯದ ಮೇಲ್ವಿಚಾರಕರಾದ ಸುಧೀರ್ ಒಕ್ಕೂಟದ ಪದಾಧಿಕಾರಿಗಳ ನಾಯಕತ್ವದಲ್ಲಿ ಇರಬೇಕಾದ ಗುಣಲಕ್ಷಣಗಳ ಬಗ್ಗೆ ತರಬೇತಿಯನ್ನು ನೀಡಿದರು. ಗುಡ್ಡೆಹೊಸೂರು ವಲಯದ ಮೇಲ್ವಿಚಾರಕರಾದ ಪವಿತ್ರಾಕ್ಷಿ ಇವರು ಬಡ್ಡಿ ಲೆಕ್ಕ ಚಾರದ ಬಗ್ಗೆ ಮಾಹಿತಿ ನೀಡಿದರು.
ಹಾಗೂ ಮಾದರಿ ಒಕ್ಕೂಟ ಸಭೆ ಯಾವ ರೀತಿ ನಡೆಸಬೇಕು ಎಂಬುದರ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಮಾಡಿಸಿ ತರಬೇತಿಯನ್ನು ನೀಡಿದರು.ಈ ಕಾರ್ಯಕ್ರಮದಲ್ಲಿ ವಲಯದ ಮೇಲ್ವಿಚಾರಕರಾದ ಅಚ್ಯುತ್ತ, ಸೇವಾ ಪ್ರತಿನಿಧಿ ರಮ್ಯಾ,ಶೋಭಾ , ಕೃಷಿ ಮೇಲ್ವಿಚಾರಕರು ಸ್ವಾಮಿ ವಲಯದ ಎಲ್ಲ ಸೇವಾ ಪ್ರತಿನಿಧಿಗಳು ಹಾಗೂ ನಂದಿಗುಂದ ಮತ್ತು ಶನಿವಾರ ಸಂತೆ ವಲಯದಲ್ಲಿ ಒಕ್ಕೂಟದ ಪದಾಧಿಕಾರಿಗಳು ಈ ಕಾರ್ಯಕ್ರಮದಲ್ಲಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
