ಸೋಮವಾರಪೇಟೆ:ಅಂತಿಮ ಬಿಕಾಂ ಪದವಿಯಲ್ಲಿ ಶೇಕಡಾ 96% ರಷ್ಟು ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ರಿಶಾ ಎಸ್.ಎ

ಸೋಮವಾರಪೇಟೆ:ಅಂತಿಮ ಬಿಕಾಂ ಪದವಿಯಲ್ಲಿ ಶೇಕಡಾ 96% ರಷ್ಟು ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ರಿಶಾ ಎಸ್.ಎ
ರಿಶಾ‌ ಎಸ್.ಎ

ಸೋಮವಾರಪೇಟೆ: ಸೋಮವಾರಪೇಟೆಯ ಸಂತ ಜೋಸೆಫರ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ರಿಶಾ ಎಸ್.ಎ ತನ್ನ ಅಂತಿಮ ವರ್ಷದ ಬಿಕಾಂ ಪದವಿಯಲ್ಲಿ 650 ಕ್ಕೆ 624 ಅಂಕದೊಂದಿಗೆ 96% ಪಡೆದು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾಳೆ. ಪಠ್ಯದ ಜೊತೆ ಜೊತೆಗೆ ಟಿಕ್ ಟ್ಯಾಕ್, ರೀಲ್ಸ್ ಮೂಲಕ ಜನಮನ ಗೆದ್ದಿರುವ ರಿಶಾ ಉತ್ತಮ ನೃತ್ಯಗಾರ್ತಿ. ಕಾಲೇಜಿರುವ ಸಂದರ್ಭದಲ್ಲಿಯೂ ರಿಯಾಲಿಟಿ ಡ್ಯಾನ್ಸ್ ಶೋಗಳಲ್ಲಿ ಸ್ಫರ್ಧಿಸುತ್ತಾ, ಜೀ ಕನ್ನಡದಲ್ಲಿ ಮೂಡಿ ಬರುವ ಡ್ಯಾನ್ಸ್ ಕಾರ್ಯಕ್ರಮಗಳಲ್ಲಿ ಕೊ ಡ್ಯಾನ್ಸರ್ ಆಗಿ ಭಾಗವಹಿಸುತ್ತ, ತಂಡದೊಂದಿಗೆ ರಾಜ್ಯ ರಾಷ್ಟ್ರ ಮಟ್ಟದ ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸುತ್ತ, ಹತ್ತು ಹಲವು ಬಹುಮಾನಗಳನ್ನು ಪಡೆದ ಹೆಮ್ಮೆಯಿದೆ. ಹಲವು ಸಂಘ ಸಂಸ್ಥೆಗಳು ರಿಶಾಳ ಪ್ರತಿಭೆ ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿದೆ. ಬಾಸ್ಕೇಟ್ ಬಾಲ್ ಆಟಗಾರ್ತಿಯಾಗಿ ಜಿಲ್ಲಾ, ರಾಜ್ಯ ಮಟ್ಟದಲ್ಲಿ ಪ್ರತಿನಿಧಿಸಿದ್ದಾಳೆ. ಪ್ರಾಥಮಿಕ ಶಿಕ್ಷಣವನ್ನು ಓ ಎಲ್ ವಿ ಕಾನ್ವೆಂಟಿನಲ್ಲಿ ಮುಗಿಸಿ, ಪದವಿಯವರೆಗೆ ಸಂತ ಜೋಸೆಫರ ವಿದ್ಯಾಸಂಸ್ಥೆಯಲ್ಲಿ ಮುಗಿಸಿ, ವಿದ್ಯಾಸಂಸ್ಥೆಯಲ್ಲಿಯೂ ಹಲವಷ್ಟು ಪ್ರಶಸ್ತಿಗಳನ್ನು ಮುಡಿಗೇರಿಕೊಂಡ ವಿದ್ಯಾರ್ಥಿನಿಯಾಗಿದ್ದಾಳೆ. ರಿಶಾ ಸೋಮವಾರಪೇಟೆಯ ರುಬೀನಾ ಎಂ.ಎ ಮತ್ತು ಆಸಿಫ್ ದಂಪತಿಗಳ ದ್ವಿತೀಯ ಪುತ್ರಿಯಾಗಿದ್ದಾಳೆ.